ಪಾರ್ಟಿಶನ್: 1947 ಪಾಕ್‌ನಲ್ಲಿ ಬ್ಯಾನ್

Update: 2017-08-25 11:32 GMT

ಗುರೀಂದರ್ ಚಡ್ಡಾ ನಿರ್ದೇಶನದ ‘ಪಾರ್ಟಿಶನ್: 1947’ ಚಿತ್ರವನ್ನು ಪಾಕಿಸ್ತಾನದಲ್ಲಿ ಬ್ಯಾನ್ ಮಾಡಲಾಗಿದೆ. ವಿದೇಶಗಳಲ್ಲಿ ವೈಸ್‌ರಾಯ್ ಹೌಸ್‌ಎಂಬ ಟೈಟಲ್‌ನೊಂದಿಗೆ ತೆರೆಕಂಡಿರುವ ಈ ಚಿತ್ರದಲ್ಲಿ, ಪಾಕಿಸ್ತಾನದ ಜನಕ ಮುಹಮ್ಮದ್ ಅಲಿ ಜಿನ್ನಾ ಪಾತ್ರದ ಬಗ್ಗೆ ತಪ್ಪುಕಲ್ಪನೆ ಮೂಡಿಸಲಾಗಿದೆಯೆಂಬ ಕಾರಣಕ್ಕಾಗಿ ನಿಷೇಧ ಹೇರಲಾಗಿದೆಯಂತೆ. ಈಗಾಗಲೇ ಪಾರ್ಟಿಶನ್: 1947’, ಆಗಸ್ಟ್ 18ರಂದು ಭಾರತದಲ್ಲಿ ತೆರೆಕಂಡಿದ್ದು, ವಿಮರ್ಶಕರಿಂದ ಉತ್ತಮ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿದೆ.

 ಪಾಕ್‌ನಲ್ಲಿ ಚಿತ್ರಕ್ಕೆ ನಿಷೇಧ ಹೇರಿರುವುದು ಗುರಿಂದರ್ ಚಡ್ಡಾಗೆ ತೀರಾ ನೋವುಂಟು ಮಾಡಿದೆಯಂತೆ. ಹಾಗಂತ ಅವರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಪಾಕಿಸ್ತಾನ ತನ್ನ ಪೂರ್ವಿಕರ ನಾಡಾಗಿದ್ದು, ಅಲ್ಲಿ ಚಿತ್ರ ನಿಷೇಧಿಸಿರುವುದು ದುರದೃಷ್ಟಕರವೆಂದು ಆಕೆ ಟ್ವೀಟಿಸಿದ್ದಾರೆ. ಈ ಚಿತ್ರಕ್ಕಾಗಿಯೇ ಗುರೀಂದರ್, ತನ್ನ ತಾಯಿ ಹುಟ್ಟಿಬೆಳೆದ ಊರಾದ ರಾವಲ್ಪಿಂಡಿಗೆ ತೆರಳಿ, ಭಾರತದ ವಿಭಜನೆಗೆ ಕಾರಣವಾದ ಘಟನಾವಳಿಗಳ ಬಗ್ಗೆ ಅಳವಾದ ಅಧ್ಯಯನ ನಡೆಸಿದ್ದರು. ಭಾರತ ವಿಭಜನೆಯಿಂದಾಗಿ ಜನಸಾಮಾನ್ಯರು ಅನುಭವಿಸಿದ ಯಾತನೆ, ‘ಪಾರ್ಟಿಶನ್: 1947’ನಲ್ಲಿ ಹೃದಯಂಗಮವಾಗಿ ಚಿತ್ರಿಸಲಾಗಿದೆ. ಹಾಲಿವುಡ್ ತಾರೆಯರಾದ ಗಿಲಿಯಾನ್ ಆ್ಯಂಡರ್ಸನ್, ಹ್ಯೂಗ್ ಬೊನೆವಿಲೆ ಮತ್ತು ಮನೀಶ್ ದಯಾಳ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News