ಪಂಚಕುಲದಲ್ಲಿ ಹಿಂಸಾಚಾರಕ್ಕೆ 25 ಬಲಿ
ಹೊಸದಿಲ್ಲಿ, ಆ.25: ದೇರಾ ಸಚ್ಚಾ ಸೌಧದ ಮುಖ್ಯಸ್ಥ ಮುಖ್ಯಸ್ಥ ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಪಂಚಕುಲದ ಸಿಬಿಐನ ವಿಶೇಷ ನ್ಯಾಯಾಯ ನೀಡಿದ ತೀರ್ಪಿನ ಬೆನ್ನಲ್ಲೇ ಪಂಚಕುಲದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿದೆ.
ಪಂಜಾಬ್, ಹರಿಯಾಣದಲ್ಲಿ ಕಂಡು ಬಂದಿದ್ದ ಹಿಂಸಾಚಾರ ಇದೀಗ ದಿಲ್ಲಿಗೂ ವ್ಯಾಪಿಸಿದೆ. ರೇವಾ ಎಸ್ ಪಿ -ಆನಂದ್ ವಿಹಾರ್ ಎಕ್ಸ್ ಪ್ರೆಸ್ ನ 2 ಬೋಗಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಎರಡು ಬಸ್ ಗಳು ಬೆಂಕಿಗಾವುತಿಯಾಗಿದೆ. ಬಸ್, ಬೈಕ್, ಕಾರುಗಳು ಬೆಂಕಿಗೆ ಧಗಧಗ ಉರಿಯುತ್ತಿದೆ.
ಲೋನಿ ಹೋಲ್ ಚಕ್ಕರ್ ನಲ್ಲಿ ದಿಲ್ಲಿ ಸಾರಿಗೆ ಸಂಸ್ಥೆ(ಡಿಟಿಸಿ)ಗೆ ಸೇರಿದ ಎರಡು ಬಸ್ ಗಳು ಸುಟ್ಟು ಕರಕಲಾಗಿದೆ.
ರಾಮ್ ರಹೀಮ್ ನ ಸಾವಿರಕ್ಕೂ ಅಧಿಕ ಬೆಂಬಲಿಗರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸಿರ್ಸಾದ ಡೇರಾ ಸಚ್ಚ ಸೌಧದ ಬಳಿ 20 ಸೇನಾ ತುಕಡಿಯನ್ನು ನಿಯೋಜಿಸಲಾಗಿದೆ. ಆಶ್ರಮದೊಳಗೆ ಪ್ರವೇಶಿಸಲು ಸೇನೆ ಸನ್ನದ್ದವಾಗಿದೆ ಎಂದು ತಿಳಿದು ಬಂದಿದೆ