10 ಕೆಜಿ ಸಜೀವ ಸ್ಪೋಟಕ ಹೊತ್ತುಕೊಂಡು ಒಂದು ಕಿಮೀ ಓಡಿದ ಪೊಲೀಸ್ ಪೇದೆ

Update: 2017-08-27 04:01 GMT

ಭೋಪಾಲ್, ಆ. 27: ಶಾಲೆಯೊಂದರ ಬಳಿ  ಪತ್ತೆಯಾಗಿದ್ದ 10 ಕೆ.ಜಿ. ತೂಕದ  ಸ್ಫೋಟಕವನ್ನು ಹೊತ್ತುಕೊಂಡು ಸುಮಾರು 1 ಕಿ.ಮೀ ದೂರಕ್ಕೆ ಸಾಗಿಸಿ ಬಾಂಬ್ ಸ್ಫೋಟದಿಂದ 400 ಶಾಲಾ ಮಕ್ಕಳು ಬಲಿಯಾಗುವುದನ್ನು ತಪ್ಪಿಸುವ ಮೂಲಕ  ಅಪೂರ್ವ ಸಾಹಸ ಮೆರೆದ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯ ಚಿಟೊರಾದಲ್ಲಿ ನಡೆದಿದೆ.

ಅಭಿಷೇಕ್ ಪಾಟೇಲ್  ಎಂಬವರೇ  ಸುಮಾರು 400 ಮಕ್ಕಳನ್ನು ರಕ್ಷಿಸಿದ ಧೀರ ಹೆಡ್ ಕಾನ್ ಸ್ಟೇಬಲ್.  ಅವರು ಬಾಂಬ್ ನ್ನು ಹೆಗಲಲ್ಲಿ ಹೊತ್ತುಕೊಂಡು ಓಡುವ 12 ಸೆಕೆಂಡ್ ಗಳ ವೀಡಿಯೊ ದಾಖಲೆ ಇದೀಗ ವೈರಲ್ ಆಗಿದೆ.

ಶುಕ್ರವಾರ ಬೆಳಗ್ಗೆ ಶಾಲಾ ಬಳಿ ಬಾಂಬ್ ಪತ್ತೆಯಾದಾಗ ಸುಮಾರು 400 ಮಕ್ಕಳು ಅಲ್ಲಿದ್ದರು. ಬಾಂಬ್ ಪತ್ತೆಯಾದ ಕೂಡಲೇ ಶಾಲಾ ಟೀಚರ್ ಪೊಲೀಸರಿಗೆ ಮಾಹಿತಿ ನೀಡಿದರು. ಶಾಲಾ ಮಕ್ಕಳನ್ನು ಹೊರಕ್ಕೆ ಕಳುಹಿಸಿ ಶಾಲೆಗೆ ಬೀಗ ಹಾಕಲಾಗಿತ್ತು. ಕೂಡಲೇ ಅಲ್ಲಿಗೆ ಅಭಿಷೇಕ್ ಪಾಟೇಲ್    ಬಂದಾಗ ಶಾಲಾ ಮಕ್ಕಳು ಅಲ್ಲಿ ಜಮಾಯಿಸಿದ್ದರು.

ಬಾಂಬ್ ನ್ನು ಅಭಿಷೇಕ್ ಹೆಗಲಲ್ಲಿ ಹೊತ್ತುಕೊಂಡು ದೂರಕ್ಕೆ ಓಡಿದರು.  ಒಂದು ವೇಳೆ ಬಾಂಬ್ ಅಲ್ಲಿ ಸ್ಫೋಟಗೊಳ್ಳುತ್ತಿದ್ದರೆ ಸುಮಾರು 500 ಮೀಟರ್ ವ್ಯಾಪ್ತಿಯಲ್ಲಿ ಹಾನಿ ಉಂಟಾಗುವ ಸಾಧ್ಯತೆ ಇತ್ತು. 400ಕ್ಕೂ ಅಧಿಕ ಮಕ್ಕಳು ಬಲಿಯಾಗುತ್ತಿದ್ದರು.

ಬಾಂಬ್ ಸ್ಫೋಟದಿಂದ ಉಂಟಾಗುವ ಭಾರೀ ಅನಾಹುತವನ್ನು ತಪ್ಪಿಸಿದ ಹೆಡ್ ಕಾನ್ ಸ್ಟೇಬಲ್ ಅಭಿಷೇಕ್ ಪಾಟೇಲ್ ಗೆ ಐಜಿಪಿ ಸತೀಶ್ ಸಕ್ಸೇನಾ ಬಹುಮಾನ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News