×
Ad

ಮಾನವ ಮಾಂಸ ತಿಂದು ಸಾಕಾಯಿತು!

Update: 2017-08-28 22:57 IST

ಜೊಹಾನ್ಸ್‌ಬರ್ಗ್, ಆ. 28: ದಕ್ಷಿಣ ಆಫ್ರಿಕದಲ್ಲಿ ಮಾನವ ಮಾಂಸ ಭಕ್ಷಣೆ ಆರೋಪವನ್ನು ಎದುರಿಸುತ್ತಿರುವ ಐವರು ವ್ಯಕ್ತಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಕೋಪೋದ್ರಿಕ್ತ ಜನರು ನ್ಯಾಯಾಲಯದ ಹೊರಗೆ ಜಮಾಯಿಸಿದ್ದರು ಎಂದು ಪೊಲೀಸರು ತಿಳಿಸಿದರು.

ಕ್ವಝುಲ್-ನಾಟಲ್ ಪ್ರಾಂತದ ಗ್ರಾಮೀಣ ಪಟ್ಟಣ ಎಸ್ಕೋರ್ಟ್ ನಿವಾಸಿಗಳಾದ ಅವರನ್ನು ಒಂದು ವಾರದ ಹಿಂದೆ ಬಂಧಿಸಲಾಗಿದೆ. ಆರೋಪಿಗಳ ಪೈಕಿ ಓರ್ವ ಪೊಲೀಸ್ ಠಾಣೆಗೆ ಬಂದು, ‘‘ನನಗೆ ಮಾನವ ಮಾಂಸ ತಿಂದು ಸಾಕಾಗಿದೆ’’ ಎಂದು ಹೇಳಿ ಶರಣಾದನು ಎನ್ನಲಾಗಿದೆ. ಬಳಿಕ ಆತ ನೀಡಿದ ಮಾಹಿತಿಯಂತೆ ಪೊಲೀಸರು ಇತರ ನಾಲ್ವರನ್ನು ಬಂಧಿಸಿದರು.

ಮೊದಲ ಆರೋಪಿಯು ಆಗಸ್ಟ್ 18ರಂದು ಮಾನವ ಕಾಲು ಮತ್ತು ಕೈಗಳನ್ನು ಒಳಗೊಂಡ ಚೀಲದೊಂದಿಗೆ ಎಸ್ಕೋರ್ಟ್ ಪೊಲೀಸ್ ಠಾಣೆಗೆ ಬಂದನು ಪೊಲೀಸರು ಹೇಳಿದರು.

ಮಾನವ ಭಕ್ಷಣೆ ಯಾವಾಗದಿಂದ ನಡೆಯುತ್ತಿದೆ ಹಾಗೂ ಎಷ್ಟು ಮಂದಿಯನ್ನು ಕೊಲ್ಲಲಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News