ಹಕ್ಕಿಗಳಂತೆ ಟೊಂಗೆಯಲ್ಲಿ ನಿದ್ರಿಸುವ ಡೈನಸಾರ್ ಪತ್ತೆ
Update: 2017-08-28 23:08 IST
ಟೊರಾಂಟೊ (ಕೆನಡ), ಆ. 28: ಸಂಶೋಧಕರು ಗೋಬಿ ಮರುಭೂಮಿಯಲ್ಲಿ ನೂತನ ಡೈನಸಾರ್ ತಳಿಯೊಂದನ್ನು ಪತ್ತೆಹಚ್ಚಿದ್ದು, ಏಳು ಕೋಟಿ ವರ್ಷಗಳ ಹಿಂದೆ ಈ ತಳಿಯ ಡೈನಸಾರ್‌ಗಳು ಮರದ ಕೊಂಬೆಯ ಮೇಲೆ ಜೊತೆಯಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದವು ಎಂದು ಹೇಳಿದ್ದಾರೆ.
ಕನಿಷ್ಠ ಕೆಲವು ಡೈನಸಾರ್‌ಗಳು, ಇಂದಿನ ಆಧುನಿಕ ಹಕ್ಕಿಗಳಂತೆ, ಮರದ ಟೊಂಗೆಯಲ್ಲಿ ಒಂದು ಕುಟುಂಬದಂತೆ ಜೊತೆಯಾಗಿ ಮಲಗುತ್ತಿದ್ದವು ಎಂಬುದು ನೂತನ ಅವಶೇಷಗಳ ಅಧ್ಯಯನ ಹೇಳುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ಮಂಗೋಲಿಯದಿಂದ ಅಕ್ರಮವಾಗಿ ರಫ್ತು ಮಾಡಲಾದ ಪಳೆಯುಳಿಕೆ ತುಂಡೊಂದರಿಂದ ನೂತನ ಡೈನಸಾರ್ ತಳಿಗೆ ಸಂಬಂಧಿಸಿದ ಪುರಾವೆಗಳನ್ನು ಪಡೆದುಕೊಳ್ಳಲಾಗಿದೆ.