ಏರ್‌ಇಂಡಿಯಾ ವಿಮಾನದಲ್ಲಿ ಇಲಿ: 9 ಗಂಟೆ ಸಂಚಾರ ವಿಳಂಬ

Update: 2017-08-28 17:58 GMT

ಹೊಸದಿಲ್ಲಿ, ಆ. 28: ಇಲಿ ಸೇರಿಕೊಂಡ ಹಿನ್ನೆಲೆಯಲ್ಲಿ ದಿಲ್ಲಿ-ಸಾನ್‌ಫ್ರಾನ್ಸಿಸ್ಕೊ ನಡುವೆ ಸಂಚರಿಸಬೇಕಿದ್ದ ಏರ್ ಇಂಡಿಯಾ ವಿಮಾನ ರವಿವಾರ 9 ಗಂಟೆ ತಡವಾಗಿ ಸಂಚರಿಸಿದೆ.

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೋಯಿಂಗ್ 777 ವಿಮಾನದಲ್ಲಿ ಇಲಿ ಸೇರಿಕೊಂಡಿರುವುದನ್ನು ಪತ್ತೆ ಹಚ್ಚಲಾಯಿತು. ಭದ್ರತಾ ಶಿಷ್ಟಾಚಾರದ ಹಿನ್ನೆಲೆಯಲ್ಲಿ ವಿಮಾನವನ್ನು ಮತ್ತೆ ನಿಲ್ದಾಣಕ್ಕೆ ತಂದು ಇಲಿಯನ್ನು ಹೊರ ಹಾಕಲಾಯಿತು. ಇದರಿಂದಾಗಿ ಬೆಳಗ್ಗೆ 2.30ಕ್ಕೆ ಹೊರಡಬೇಕಾಗಿದ್ದ ವಿಮಾನ 9 ಗಂಟೆ ವಿಳಂಬವಾಗಿ ಅಪರಾಹ್ನ ಹೊರಟಿತು.

ವಿಮಾನ ಸಂಚಾರದಲ್ಲಿ ವಿಳಂಬವಾಗಿರುವ ವಿಚಾರವನ್ನು ಏರ್‌ಇಂಡಿಯಾ ಅಧ್ಯಕ್ಷ ರಾಜೀವ್ ಬನ್ಸಾಲ್ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ವಿಮಾನದೊಳಗೆ ಇಲಿ ಸೇರಿಕೊಂಡಿರುವ ಬಗ್ಗೆ ಹಾಗೂ ಮುಂದೆ ಹೀಗಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ವರದಿ ಕೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News