×
Ad

ರಾಜಸ್ಥಾನ: ಹಂದಿಜ್ವರಕ್ಕೆ 86 ಬಲಿ

Update: 2017-08-30 20:23 IST

ಜೈಪುರ, ಆ. 30: ರಾಜಸ್ಥಾನದಲ್ಲಿ ಹಂದಿ ಜ್ವರ ಪೀಡಿತರಾಗಿ ಈ ವರ್ಷ ಜನವರಿಯಿಂದ 86 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಹೊರ ರಾಜ್ಯದ ಐವರು ಸೇರಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ಹಂದಿ ಜ್ವರ ಪೀಡಿತರಾಗಿ ಭಿಲ್ವಾರಾ ಜಿಲ್ಲೆಯ ಮಂದಲ್‌ಗಡದ ಶಾಸಕಿ ಕೀರ್ತಿ ಕುಮಾರಿ ಮೃತಪಟ್ಟಿದ್ದರು. ಹಂದಿ ಜ್ವರಕ್ಕೆ ಸಂಬಂಧಿಸಿ 3,440 ರಕ್ತ ಮಾದರಿಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ 910 ಮಾದರಿಗಳಲ್ಲಿ ಹಂದಿ ಜ್ವರದ ವೈರಸ್ ಪತ್ತೆಯಾಗಿದೆ.

ಈ ವರ್ಷದ ಮಾರ್ಚ್ 17ರ ವರೆಗೆ ಹಂದಿ ಜ್ವರ ಪೀಡಿತರಾಗಿ ಐವರು ಮೃತಪಟ್ಟಿದ್ದಾರೆ. ಹಾಗೂ 18 ಮಂದಿಯಲ್ಲಿ ಹಂದಿ ಜ್ವರದ ವೈರಸ್ ಪತ್ತೆಯಾಗಿದೆ.

ಒಟ್ಟು ಹಂದಿ ಜ್ವರ ಪೀಡಿತರಲ್ಲಿ 358 ಮಂದಿ ಜೈಪುರದಲ್ಲೇ ಪತ್ತೆಯಾಗಿದ್ದಾರೆ. ಹಂದಿ ಜ್ವರ ಪೀಡಿತರಾಗಿ ರಾಜಸ್ಥಾನದ ರಾಜಧಾನಿಯಲ್ಲಿ 21 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಇದರ ಅನಂತರದ ಸ್ಥಾನವನ್ನು ಕೋಟಾ ಪಡೆದುಕೊಂಡಿದ್ದು, ಹಂದಿ ಜ್ವರ ಪೀಡಿತರಾಗಿ ಇಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಐಡಿಎಸ್‌ಪಿಯ ನೋಡೆಲ್ ಅಧಿಕಾರಿ ಆದಿತ್ಯ ಆತ್ರೇಯ ತಿಳಿಸಿದ್ದಾರೆ.

ಈ ಋತು ವೈರಸ್‌ಗೆ ಅನುಕೂಲಕರ ವಾತಾವರಣ ಅಲ್ಲ. ವೈರಸ್‌ಗಳು ಇನ್ನಷ್ಟೇ ಕ್ರಿಯಾಶೀಲವಾಗಬೇಕು ಎಂದು ಅವರು ತಿಳಿಸಿದ್ದಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ವೈರಸ್ ಮತ್ತೆ ಕ್ರಿಯಾಶೀಲವಾಗುವ ಹಿಂದಿರುವ ಕಾರಣದ ಬಗ್ಗೆ ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿರುವವರು ವೈರಸ್‌ನೊಂದಿಗೆ ಹೋರಾಡಲು ಸಮರ್ಥರಾಗುತ್ತಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News