ಡೇರಾ ಸಚ್ಚಾ ಸೌದಾಗೆ ಗುರ್ಮೀತ್‌ನ ಪುತ್ರ ಜಸ್ಮೀತ್ ಮುಖ್ಯಸ್ಥ?
Update: 2017-08-31 14:58 IST
ಚಂಡೀಗಡ, ಆ.31: ಅತ್ಯಾಚಾರ ಆರೋಪದಲ್ಲಿ ಸ್ವಘೋಷಿತ ದೇವಮಾನವ ಗುರ್ಮೀತ್ ಸಿಂಗ್ ಜೈಲುಪಾಲಾಗಿರುವ ಹಿನ್ನೆಲೆಯಲ್ಲಿ ಡೇರಾ ಸಚ್ಚಾ ಸೌದಾದ ನೂತನ ಮುಖ್ಯಸ್ಥನಾಗಿ ಪುತ್ರ ಜಸ್ಮೀತ್ ಸಿಂಗ್ ಆಯ್ಕೆಯಾಗುವ ಸಾಧ್ಯತೆಯಿದೆ.
ಬುಧವಾರ ಸಿರ್ಸಾದಲ್ಲಿ ನಡೆದ 45 ಸದಸ್ಯರನ್ನು ಒಳಗೊಂಡ ಡೇರಾದ ಕೋರ್ ಕಮಿಟಿ ಸಭೆಯ ಬಳಿಕ ಗುರ್ಮೀತ್ ತಾಯಿ ನಸಿಬ್ ಕೌರ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡೇರಾ ಅನುಯಾಯಿಗಳು ಜಸ್ಮೀತ್‌ನನ್ನು ತನ್ನ ಗುರು ಎಂದು ಸ್ವೀಕರಿಸುವ ಸಾಧ್ಯತೆಯಿಲ್ಲ. ಆದರೆ, ಆತ ಡೇರಾದ ಆಡಳಿತ ಹಾಗೂ ಇತರ ಕಾರ್ಯಚಟುವಟಿಕೆಯನ್ನು ನೋಡಿಕೊಳ್ಳಲಿದ್ದಾರೆ ಎಂದು ಕೌರ್ ತಿಳಿಸಿದ್ದಾರೆ.
ಜಸ್ಮೀತ್ ಸಿಂಗ್‌ರಲ್ಲದೆ, ಹನಿಪ್ರೀತ್ ಹಾಗೂ ವಿಪಸ್ಸನಾ ಅವರು ಗುರ್ಮೀತ್ ಸಿಂಗ್ ಉತ್ತರಾಧಿಕಾರಿಯಾಗುವ ರೇಸ್‌ನಲ್ಲಿದ್ದಾರೆ.