ತರಗತಿಯೊಳಗೆ ಸಹಪಾಠಿಗೆ ಗುಂಡಿಕ್ಕಿದರು..!
Update: 2017-09-02 17:47 IST
ಸೋನಿಪತ್, ಸೆ.2: ತರಗತಿಯೊಳಗೆ ಇಬ್ಬರು ವಿದ್ಯಾರ್ಥಿಗಳು ತಮ್ಮ ಸಹಪಾಠಿಯೊಬ್ಬನಿಗೆ ಗುಂಡಿಕ್ಕಿದ ಘಟನೆ ಹರ್ಯಾಣದ ಸೋನಿಪತ್ ಜಿಲ್ಲೆಯ ಐಟಿಐ ಒಂದರಲ್ಲಿ ಸಂಭವಿಸಿದೆ.
ತರಗತಿಯೊಳಗೆ ಸಹಪಾಠಿಗೆ ಗುಂಡಿಕ್ಕಿ ಇಬ್ಬರು ಪರಾರಿಯಾಗುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 2 ದಿನಗಳ ಮೊದಲ ಇವರ ನಡುವೆ ಜಗಳ ನಡೆದಿತ್ತು. ಇದೇ ಕೋಪದಲ್ಲಿ ಸಹಪಾಠಿಗೆ ಗುಂಡಿಕ್ಕಿದ್ದಾರೆ ಎನ್ನಲಾಗಿದೆ. ಮೃತ ವಿದ್ಯಾರ್ಥಿಯನ್ನು ಮೋಹಿತ್ ಎಂದು ಗುರುತಿಸಲಾಗಿದ್ದು, ಸುಮಿತ್ ಮತ್ತು ಕುನಾಲ್ ಆರೋಪಿಗಳು ಎನ್ನಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಗುಂಡಿಕ್ಕಿದ ತಕ್ಷಣ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.