×
Ad

ಅಂದು ಅಡ್ವಾಣಿಯನ್ನು ಬಂಧಿಸಿದ್ದ ಐಎಎಸ್ ಅಧಿಕಾರಿ ಇಂದು ಮೋದಿ ಸಂಪುಟದಲ್ಲಿ ಸಚಿವ!

Update: 2017-09-03 19:30 IST

ಹೊಸದಿಲ್ಲಿ, ಸೆ.3: ಕೇಂದ್ರ ಸಚಿವ ಸಂಪುಟ ಪುನಾರಚನೆಗೊಂಡು ಇಂದು ಹಲವರು ಹೊಸ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ ಹಾಗೂ ಇನ್ನೂ ಕೆಲವರು ಭಡ್ತಿ ಪಡೆದಿದ್ದಾರೆ. ಮೋದಿ ನೂತನ ಸಂಪುಟದಲ್ಲಿ 1990ರಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರನ್ನು ಬಂಧಿಸಿದ್ದ ಐಎಎಸ್ ಅಧಿಕಾರಿಯೂ ಇದ್ದಾರೆ!.

ಕೇಂದ್ರ ಸಚಿವ ಸಂಪುಟ ಪುನಾರಚನೆಗೊಂಡು ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ರಾಜ್ ಕುಮಾರ್ ಸಿಂಗ್ ಇಂಧನ ಇಲಾಖೆಗೆ ಭಡ್ತಿ ಪಡೆದಿದ್ದಾರೆ. ಹೊಸ ಮತ್ತು ನವೀಕರಿಸಬಹುದಾದ ಇಂಧನಗಳ ಇಲಾಖೆಯ ಜವಾಬ್ದಾರಿಯನ್ನೂ ಅವರಿಗೆ ವಹಿಸಲಾಗಿದೆ. 2013ರಲ್ಲಿ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸುಮಾರು 4  ದಶಕಗಳ ಕಾಲ ರಾಜ್ ಕುಮಾರ್ ಸಿಂಗ್ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

1990ರಲ್ಲಿ ಸೋಮನಾಥದಿಂದ ಅಯೋಧ್ಯೆಯವರೆಗೆ ನಡೆದ ಬಿಜೆಪಿ ಹಿರಿಯರ ರಥಯಾತ್ರೆಯ ಸಂದರ್ಭ ಅಂದಿನ ಬಿಹಾರ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಆದೇಶದಂತೆ ರಾಜ್ ಕುಮಾರ್ ಸಿಂಗ್ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರನ್ನು ಬಂಧಿಸಿದ್ದರು.

ತನ್ನ ಸೇವೆಯಿಂದ ನಿವೃತ್ತರಾದ ನಂತರ 2013ರಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡರು. ಬಿಹಾರ ಹಾಗೂ ಕೇಂದ್ರದಲ್ಲಿ ಅವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಆರಾಹ್ ಕ್ಷೇತ್ರದಿಂದ ಅವರು ಸ್ಪರ್ಧಿಸಿದ್ದರು.

ಪೊಲೀಸ್ ಮತ್ತು ಜೈಲು ವ್ಯವಸ್ಥೆಯಲ್ಲಿ ಆಧುನೀಕರಣ ಹಾಗೂ ವಿಪತ್ತು ನಿರ್ವಹಣೆಯ ಯೋಜನೆಯಲ್ಲಿ ರಾಜ್ ಕುಮಾರ್ ಸಿಂಗ್ ರ ತಮ್ಮ ಕಾರ್ಯದಿಂದ ಪ್ರಸಿದ್ಧಿ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News