ಭಾಗವತ್‍ರ ಕಾರ್ಯಕ್ರಮಕ್ಕೆ ಪ.ಬಂಗಾಳ ಸರಕಾರದಿಂದ ಅನುಮತಿ ನಿರಾಕರಣೆ
ಕೊಲ್ಕತಾ, ಸೆ.5: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಲಿರುವ ಕಾರ್ಯಕ್ರಮಕ್ಕೆ ಪಶ್ಚಿಮಬಂಗಾಳ ಸರಕಾರ ಅನುಮತಿ ನಿರಾಕರಿಸಿದೆ. ಅಕ್ಟೊಬರ್ ಮೂವತ್ತಕ್ಕೆ ಕೊಲ್ಕತ್ತಾದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕಾಗಿ ಬುಕ್ ಮಾಡಿದ್ದ ಸರಕಾರಿ ಸಭಾಂಗಣದ ಅನುಮತಿಯನ್ನು ರದ್ದುಪಡಿಸಲಾಗಿದೆ. ಭಾರತದ ರಾಷ್ಟ್ರೀಯ ಆಂದೋಲನದಲ್ಲಿ ಸಿಸ್ಟರ್ ನಿವೇದಿತಾರ ಪಾತ್ರ ಎನ್ನುವ ವಿಚಾರಗೋಷ್ಠಿಗೆ ಸಭಾಂಗಣವನ್ನು ಪ.ಬಂಗಾಳ ಸರಕಾರ ನಿರಾಕರಿಸಿದೆ.
ವಿಜಯ ದಶಮಿ, ಮತ್ತು ಮಹರ್ರಂ ಹತ್ತಕ್ಕೆ ನಿಕಟವಾಗಿ ಕಾರ್ಯಕ್ರಮವನ್ನು ಅಯೋಜಕರು ಇರಿಸಿಕೊಂಡಿದ್ದರು. ಆದ್ದರಿಂದ ಹಲವಾರು ರೀತಿಯ ಕಾನೂನು ಸಮಸ್ಯೆ ಸೃಷ್ಟಿಯಾಗಬಹುದು ಎನ್ನುವ ನಿಟ್ಟಿನಲ್ಲಿ ಸರಕಾರ ಸಭಾಂಗಣವನ್ನು ನಿರಾಕರಿಸಿದೆ. ಇದೇ ಕಾರ್ಯಕ್ರಮದಲ್ಲಿ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಕೂಡಾ ಮುಖ್ಯ ಅತಿಥಿಯಾಗಿದ್ದಾರೆ.
ಸರಕಾರ ಕಾರ್ಯ ಕ್ರಮಕ್ಕೆ ಅನುಮತಿ ನಿರಾಕರಿಸಿದ್ದರಿಂದ ಆರೆಸ್ಸೆಸ್ ಪ್ರತಿಭಟನೆಗಿಳಿದಿದೆ. ಎಲ್ಲ ನಿಯಮಗಳನ್ನು ಪಾಲಿಸಿ ಜುಲೈಯಲ್ಲಿ ಸರಕಾರದ ಅನುಮತಿಯನ್ನು ಪಡೆಯಲಾಗಿತ್ತು. ಆದರೆ, ಆಗಸ್ಟ್ ಮೂವತ್ತೊಂದಕ್ಕೆ ಅಡಿಟೊರಿಯಂನ ಬುಕ್ಕಿಂಗ್‍ನನ್ನು ಸರಕಾರ ರದ್ದು ಪಡಿಸಿದೆ ಎಂದು ಆಯೋಜಕರು ತಿಳಿಸಿದ್ದಾರೆ.