ಕೇರಳದಲ್ಲಿ ಬೀಫ್ ಸೇವನೆ ಮುಂದುವರಿಯಲಿದೆ: ಕೇಂದ್ರ ಸಚಿವ ಅಲ್ಫೋನ್ಸ್
Update: 2017-09-06 19:59 IST
ಹೊಸದಿಲ್ಲಿ, ಸೆ.6: ಕೇರಳದಲ್ಲಿ ಬೀಫ್ ಸೇವನೆ ಮುಂದುವರಿಯಲಿದೆ ಎಂದು ನೂತನ ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಫೋನ್ಸ್ ಕಣ್ಣಂತಾನಂ ಹೇಳಿದ್ದಾರೆ.
ಬೀಫನ್ನು ಸೇವಿಸಬಾರದು ಎಂದು ಬಿಜೆಪಿ ಎಂದಿಗೂ ಹೇಳಿಲ್ಲ. ರಾಜ್ಯದಲ್ಲಿ ಬೀಫ್ ಸೇವನೆ ಮುಂದುವರಿಯಲಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಹೇಳಿರುವಂತೆ ಕೇರಳದಲ್ಲೂ ಬೀಫ್ ಸೇವನೆ ಮುಂದುವರಿಯಲಿದೆ” ಎಂದವರು ಹೇಳಿದರು.
ಬೀಫ್ ತಿನ್ನಬಾರದು ಎಂದು ಎಂದಿಗೂ ಬಿಜೆಪಿ ಆದೇಶಿಸಿಲ್ಲ. ಯಾವುದೇ ಪ್ರದೇಶದಲ್ಲಿ ಆಹಾರ ಪದ್ಧತಿಯ ಮೇಲೆ ನಾವು ನಿಯಂತ್ರಣ ಹೇರಿಲ್ಲ. ಅದು ಜನರ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದವರು ಹೇಳಿದ್ದಾರೆ.
“ಮೋದಿ ಅಧಿಕಾರಕ್ಕೆ ಬಂದರೆ ಕ್ರಿಶ್ಚಿಯನ್ನರನ್ನು ಕೊಲ್ಲಲಾಗುವುದು, ಚರ್ಚ್ ಗಳನ್ನು ನಾಶ ಮಾಡಲಾಗುವುದು ಎನ್ನುವ ಪೂರ್ವಾಗ್ರಹಗಳಿತ್ತು. ನಿಮ್ಮ ಇಚ್ಛೆಯದ್ದನ್ನು ನಂಬಿ ಎಂದು ಪ್ರಧಾನಿ ಹೇಳಿದ್ದಾರೆ. ಎಲ್ಲರೊಂದಿಗೆ ಒಗ್ಗೂಡಿ ಸಾಗುವಲ್ಲಿ ಪ್ರಧಾನಿ ಅದ್ಭುತ ಕಾರ್ಯ ಮಾಡಿದ್ದಾರೆ” ಎಂದು ಅಲ್ಫೋನ್ಸ್ ಈ ಸಂದರ್ಭ ಹೇಳಿದರು.