ನೂತನ ಪಿಟಿಐ ಅಧ್ಯಕ್ಷರಾಗಿ ವಿವೇಕ ಗೊಯೆಂಕಾ ಆಯ್ಕೆ

Update: 2017-09-07 14:20 GMT

ಹೊಸದಿಲ್ಲಿ,ಸೆ.7: ದೇಶದ ಅತ್ಯಂತ ದೊಡ್ಡ ಸುದ್ದಿಸಂಸ್ಥೆಯಾಗಿರುವ ಪಿಟಿಐನ ನೂತನ ಅಧ್ಯಕ್ಷರಾಗಿ ಎಕ್ಸ್‌ಪ್ರೆಸ್ ಸಮೂಹದ ಸಿಎಂಡಿ ವಿವೇಕ ಗೊಯೆಂಕಾ(60) ಮತ್ತು ಉಪಾಧ್ಯಕ್ಷರಾಗಿ ದಿ ಹಿಂದು ಪತ್ರಿಕೆಯ ಮಾಜಿ ಮುಖ್ಯ ಸಂಪಾದಕ ಎನ್.ರವಿ(69) ಅವರು ಗುರುವಾರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪಿಟಿಐನ 69ನೇ ವಾರ್ಷಿಕ ಮಹಾಸಭೆಯ ಬಳಿಕ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಆಯ್ಕೆಗಳನ್ನು ಮಾಡಲಾಗಿದೆ.

ಈವರೆಗೆ ಅಧ್ಯಕ್ಷರಾಗಿದ್ದ ಮನೋರಮಾ ಬಳಗದ ರಿಯಾದ್ ಮ್ಯಾಥ್ಯೂ ಅವರ ಉತ್ತರಾಧಿಕಾರಿಯಾಗಿರುವ ಗೊಯೆಂಕಾ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News