'ರಾಜಹಂಸ'ದ ಪಯಣ ಶುರು

Update: 2017-09-08 09:32 GMT

ಮೂರು ದಶಕದಿಂದ ಗಾಂಧಿನಗರದಲ್ಲಿ ವಿತರಕರಾಗಿ ಗುರುತಿಸಿಕೊಂಡಿರುವ ಮಾರ್ಸ್ ಸುರೇಶ್ ಚಿತ್ರದ  ಹಂಚಿಕೆ ನಡೆಸಿದ್ದಾರೆ. ಚಿತ್ರದ ನಾಯಕ ಗೌರೀಶಂಕರ್ ಹೇಳುವ ಪ್ರಕಾರ "ನನ್ನಿಂದ ಹಿಡಿದು ಇಡೀ ಚಿತ್ರತಂಡದ ಬಹುತೇಕರು ಯಾವುದೇ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲದವರು. ವಿತರಣೆಯ ಕುರಿತಾದ ಜವಾಬ್ದಾರಿ ಸುರೇಶ್ ಅವರು ವಹಿಸಿಕೊಂಡಾಗ ನೆಮ್ಮದಿಯಾಯಿತು. ಕಂಟೆಂಟ್ ಚೆನ್ನಾಗಿದ್ದರೆ ಜನ ಇಷ್ಟಪಡುತ್ತಾರೆ. ಪ್ರಚಾರ ಚೆನ್ನಾಗಿ ಚಿತ್ರ ಚೆನ್ನಾಗಿರದಿದ್ದರೆ ಏನು ಉಪಯೋಗ? ಚಿತ್ರದ 'ಮುಲಮುಲ' ಹಾಡು ಸ್ವಲ್ಪ ಸಮಯದಲ್ಲೇ ನಾಲ್ಕು ಲಕ್ಷ ವಿವ್ಸ್ ಪಡೆದಿದೆ. ನಾಯಕಿ ರಂಜನಿಯವರು ಖುದ್ದಾಗಿ ಕರೆ ಮಾಡಿ ಯಾವಾಗ ಪ್ರಮೋಶನ್ ಗೆ ಬರಬೇಕು ಎಂದು ಅವರಾಗಿಯೇ ವಿಚಾರಿಸಿ ಸಹಕಾರ ನೀಡಿದ್ದಾರೆ.

ವರ್ಷಗಳ ಕಾಲ ಚಿತ್ರೀಕರಣ ಮಾಡಿದಾಗ ಪ್ರೊಡಕ್ಷನ್ ಟೀಮ್ ನೀಡಿದ ಸಹಕಾರ ಮೆಚ್ಚಲೇಬೇಕು. ಪೋಸ್ಟ್ ಪ್ರೊಡಕ್ಷನ್ ಕೂಡ ತುಂಬ ದಿನಾ ಆಗಿದೆ. ಇಂದು ಒಳ್ಳೆಯ ಓಪನಿಂಗ್ ಕೂಡ ಪಡೆದಿದ್ದು, ಚಿತ್ರದ ಬಗ್ಗೆ ಮೆಚ್ಚುಗೆಯ ಅಭಿಪ್ರಾಯ ಕೇಳಿ ಬರುತ್ತಿರುವುದು ಖುಷಿಯಾಗಿದೆ" ಎನ್ನುವ ಅಭಿಪ್ರಾಯವಿತ್ತು. ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಮಾತನಾಡಿ  "ಚಿತ್ರದಲ್ಲಿನ ನಾಟಕದ ಸನ್ನಿವೇಶಕ್ಕಾಗಿ ಸ್ನೇಹಿತ ಧನಂಜಯ್  ದಿಡಿಗನ ಸಹಾಯ ಪಡೆದಿದ್ದೇನೆ. 35ರಷ್ಟು ಕಲಾವಿದರು ಚಿತ್ರದಲ್ಲಿದ್ದಾರೆ. ಛಾಯಾಗ್ರಾಹಕ, ಸಹಾಯಕ ನಿರ್ದೇಶಕರು ಕೂಡ ಹೊಸಬರು" ಎಂದರು.

ಚಿತ್ರದ ಮೂಲಕ ಬೆಳ್ಳಿತೆರೆಯ ನಾಯಕಿಯಾಗಿದ್ದಾರೆ 'ಪುಟ್ಟಗೌರಿ ಮದುವೆ' ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್. ಅವರು "ಚಿತ್ರೀಕರಣ ಶುರುವಾದಾಗಿನಿಂದ ಮುಗಿಯುವುದರೊಳಗೆ ನನ್ನ  ಮನಸ್ಥಿತಿ ಬದಲಾಗಿದೆ. ಅಂದು ಎಂಬಿಎ ಮಾಡುತ್ತಿದ್ದೆ. ಮುಗಿಸಿ ಕೆಲಸಕ್ಕೆ ಸೇರಬೇಕೆಂಬ ಯೋಚನೆಯಿತ್ತು. ಆದರೆ ಈಗ ಸಿನಿಮಾದಲ್ಲೇ ನಟಿಸಿ‌ ಉತ್ತಮ ನಟಿಯಾಗಿ ಗುರುತಿಸಿಕೊಳ್ಳಬೇಕು ಅನಿಸಿದೆ. ಅಂಥದೊಂದು ಒಳ್ಳೆಯ ವಾತಾವರಣ, ಚಿತ್ರ" ಪ್ರಥಮದಲ್ಲೇ ದೊರಕಿದ್ದು ಖುಷಿಯಾಗಿದೆ ಎಂದರು. ಚಿತ್ರದಲ್ಲಿ 
ಯಮುನಾ, ಶ್ರೀಧರ್, ಬುಲೆಟ್ ಪ್ರಕಾಶ್, ಬಿ ಸಿ ಪಾಟೀಲ್, ರಾಜು ತಾಳಿಕೋಟೆ ಮೊದಲಾದ ಕಲಾವಿದರು ನಟಿಸಿದ್ದಾರೆ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News