ಸಪ್ನಾದೀದಿಯಾಗಿ ದೀಪಿಕಾ

Update: 2017-09-08 12:07 GMT

‘ಪೀಕು’ ಚಿತ್ರದಲ್ಲಿ ತಮ್ಮ ಅಭಿನಯ ಜುಗಲ್‌ಬಂದಿಯಿಂದ ಚಿತ್ರರಸಿಕರನ್ನು ರಂಜಿಸಿದ್ದ ಇರ್ಫಾನ್ ಖಾನ್, ದೀಪಿಕಾ ಪಡುಕೋಣೆ ಜೋಡಿ ಮತ್ತೊಮ್ಮೆ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. 1980ರ ದಶಕದಲ್ಲಿ ಮುಂಬೈ ಮಹಾನಗರವನ್ನೇ ನಡುಗಿಸಿದ್ದ ಮಾಫಿಯಾ ರಾಣಿ ಸಪ್ನಾದೀದಿಯ ಕುರಿತಾದ ಬಯೋಪಿಕ್ ಚಿತ್ರದಲ್ಲಿ ಈ ಇಬ್ಬರು ಪ್ರತಿಭಾವಂತ ತಾರೆಯರು ಮತ್ತೆ ಒಂದಾಗುತ್ತಿದ್ದಾರೆ.

ವಿಶಾಲ್ ಭಾರದ್ವ್ವಾಜ್, ಕಿರಾಜ್ ಎಂಟರ್‌ಟೈನ್‌ಮೆಂಟ್ ಹಾಗೂ ಟಿ-ಸಿರೀಸ್‌ನ ಭೂಷಣ್‌ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವು ಮುಂದಿನ ವಾರ ಸೆಟ್ಟೇರಲಿದೆ. ಅದ್ದೂರಿಯಾಗಿ ನಿರ್ಮಾಣಗೊಳ್ಳಲಿರುವ ಈ ಬಯೋಪಿಕ್ ಚಿತ್ರವು ಎಲ್ಲಾ ಸರಿಹೋದಲ್ಲಿ ಮುಂದಿನ ವರ್ಷದ ಅಕ್ಟೋಬರ್ ವೇಳೆಗೆ ಬಿಡುಗಡೆಗೊಳ್ಳಲಿದೆ. ಸದ್ಯ ಇರ್ಫಾನ್ ‘ಡೂಬ್- ನೋ ಬೆಡ್ ಆಫ್ ರೋಸಸ್’ ಹಾಗೂ ‘ದಿ ಸಾಂಗ್ ಆಫ್ ಸ್ಕಾರ್ಪಿ ಯಾನ್ಸ್’ ಚಿತ್ರಗಳಲ್ಲಿ ನಟಿಸುತ್ತಿದ್ದರೆ, ದೀಪಿಕಾ ಅಭಿನಯದ ‘ಪದ್ಮಾವತಿ’ ಶೀಘ್ರದಲ್ಲೇ ತೆರೆಕಾಣಲು ಸಜ್ಜಾಗುತ್ತಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿರುವ ಪದ್ಮಾವತಿಯಲ್ಲಿ ರಣವೀರ್ ಸಿಂಗ್ ಹಾಗೂ ಶಹೀದ್ ಕಪೂರ್ ನಟಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News