ಲಕ್ನೊ ಸೆಂಟ್ರಲ್ ನಲ್ಲಿ ಫರ್ಹಾನ್ ಗೆ ಸರಳ ಉಡುಪು

Update: 2017-09-08 12:35 GMT

ಬಾಲಿವುಡ್‌ನಲ್ಲಿ ಚ್ಯಾಲೆಂಜಿಂಗ್ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ತಾನೋರ್ವ ಅಪ್ಪಟ ಪ್ರತಿಭಾವಂತ ಕಲಾವಿದನೆಂಬುದನ್ನು ಫರ್ಹಾನ್ ಅಖ್ತರ್ ಸಾಬೀತುಪಡಿಸಿದ್ದಾರೆ. ಯಾವುದೇ ಪಾತ್ರವಾದರೂ ಸರಿ ಅದಕ್ಕೆ ಜೀವತುಂಬುವ ಕಲೆ ಫರ್ಹಾನ್‌ಗೆ ಸಿದ್ಧಿಸಿದೆ. ಈಗ ಮತ್ತೊಮ್ಮೆ ಆತ, ತನ್ನ ಮುಂದಿನ ಚಿತ್ರ ‘ಲಕ್ನೊ ಸೆಂಟ್ರಲ್’ನಲ್ಲಿ ಅದನ್ನು ಸಾಬೀತುಪಡಿಸಲಿದ್ದಾರೆ.

ಲಕ್ನೊ ಸೆಂಟ್ರಲ್ ಬಿಗ್ ಬಜೆಟ್ ಚಿತ್ರವಾದರೂ, ನಾಯಕ ಫರ್ಹಾನ್ ಪಾತ್ರದ ಕಾಸ್ಟೂಮ್‌ಗಳಿಗೆ ನಿರ್ಮಾಪಕರು ಅತ್ಯಂತ ಕಡಿಮೆ ಹಣವನ್ನು ಖರ್ಚು ಮಾಡಿದ್ದಾರಂತೆ. ಇಡೀ ಚಿತ್ರದಲ್ಲಿ ಫರ್ಹಾನ್ ಅವರ ಉಡುಗೆಗಳಿಗೆ ಕೇವಲ 5 ಸಾವಿರ ರೂ. ಖರ್ಚಾಗಿದೆಯಂತೆ.

‘ಲಕ್ನೊ ಸೆಂಟ್ರಲ್’ನಲ್ಲಿ ಫರ್ಹಾನ್, ಉತ್ತರಪ್ರದೇಶದ ಮೊರದಾಬಾದ್ ಪಟ್ಟಣದ ಮಧ್ಯಮವರ್ಗದ ಯುವಕ ಕಿಶನ್‌ನ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ. ಸುಳ್ಳು ಕೊಲೆ ಆರೋಪದಲ್ಲಿ ಜೈಲು ಸೇರುವ ಅಮಾಯಕ ಯುವಕನಾಗಿ ಅವರು ಅಭಿನಯಿಸಿದ್ದಾರೆ.

ಪಾತ್ರಕ್ಕೆ ಸಹಜತೆ ತುಂಬುವ ಉದ್ದೇಶದಿಂದ ಚಿತ್ರದುದ್ದಕ್ಕೂ ಫರ್ಹಾನ್, ರಸ್ತೆ ಬದಿಯಲ್ಲಿ ಮಾರಾಟವಾಗುವ ಅಗ್ಗದ ಉಡುಪುಗಳನ್ನು ಧರಿಸಿದ್ದಾರಂತೆ.

ಫರ್ಹಾನ್ ಅಖ್ತರ್ ನಾಯಕನಾಗಿರುವ ‘ಲಕ್ನೊ ಸೆಂಟ್ರಲ್’ನಲ್ಲಿ ಜಿಪ್ಪಿ ಗ್ರೆವಾಲ್ ನಾಯಕಿ. ರೋನಿತ್ ರಾಯ್, ದೀಪಕ್ ಡೋಬ್ರಿಯಾಲ್, ಡಯಾನಾ ಪೆಂಟಿ, ಮತ್ತಿತರರು ಮುಖ್ಯಪಾತ್ರಗಳಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News