ಬಾಲಿವುಡ್ ಕ್ಯಾರವಾನ್ ನಲ್ಲಿ ದುಲ್ಕರ್

Update: 2017-09-08 12:55 GMT

ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್‌ಗಳ ಸಾಲಿಗೆ ಸೇರ್ಪಡೆಗೊಂಡಿರುವ ದುಲ್ಕರ್‌ಸಲ್ಮಾನ್ ಬಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆಂಬ ಸುದ್ದಿ ಅವರ ಅಭಿಮಾನಿಗಳನ್ನು ಪುಳಕಗೊಳಿಸಿತ್ತು. ಆದಾಗ್ಯೂ ನಿರ್ದೇಶಕ ಆಕಾಶ್ ಖುರಾನಾ ಚಿತ್ರಕ್ಕೆ ಹೆಸರಿಡಲು ವಿಳಂಬಿಸಿದ್ದರು. ಇದೀಗ ಈ ಚಿತ್ರಕ್ಕೆ ‘ಕ್ಯಾರವಾನ್’ ಎಂದು ಹೆಸರಿಡಲಾಗಿದೆ.

ಆಗಸ್ಟ್ ಅಂತ್ಯದಲ್ಲಿ ಚಿತ್ರದ ಶೂಟಿಂಗ್ ಆರಂಭಗೊಂಡಿದ್ದು, ಮುಂಬೈ ಹಾಗೂ ಎರ್ನಾಕುಲಂಗಳಲ್ಲಿ ಚಿತ್ರೀಕರಣ ನಡೆಯಲಿದೆ.

‘ಯೇ ಜವಾನಿ ಹೇ ದಿವಾನಿ’, ‘2 ಸ್ಟೇಟ್ಸ್’ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಹುಸೈನ್ ದಲಾಲಿ ಜೊತೆಗೂಡಿ ನಿರ್ದೇಶಕ ಖುರಾನಾ ಅವರು ‘ಕ್ಯಾರವಾನ್’ಗೆ ಚಿತ್ರಕಥೆ ಬರೆದಿದ್ದಾರೆ. ಜರ್ನಿ ಸ್ಟೋರಿಯನ್ನು ಹೊಂದಿರುವ ಈ ಚಿತ್ರದಲ್ಲಿ ಜನಪ್ರಿಯ ನಟ ಇರ್ಫಾನ್ ಖಾನ್‌ಗೂ ಪ್ರಮುಖವಾದ ಪಾತ್ರವೊಂದಿದೆ. ‘ಎ ಗರ್ಲ್ ಇನ್ ದಿ ಸಿಟಿ’ ಎಂಬ ಇಂಟರ್‌ನೆಟ್ ಸೀರಿಯಲ್‌ನಲ್ಲಿ ನಟಿಸಿ ಗಮನಸೆಳೆದಿರುವ ಮಿಥಿಲಾ ಪಾಲ್ಕರ್ ಚಿತ್ರದ ನಾಯಕಿ. ರೋನಿ ಸ್ಕ್ರೂವಾಲಾ ನಿರ್ಮಾಣದ ಈ ಚಿತ್ರದಲ್ಲಿ ದುಲ್ಕರ್ ಬೆಂಗಳೂರಿನ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಕ್ಯಾರವಾನ್’ ದುಲ್ಕರ್‌ಗೆ ಬಾಲಿವುಡ್‌ನಲ್ಲಿಯೂ ಅವಕಾಶಗಳ ಹೆಬ್ಬಾಗಿಲನ್ನು ತೆರೆಯಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News