ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮ ಕಾರಿನ ಚಿತ್ರ ಪೋಸ್ಟ್ ಮಾಡಿದ್ದೀರಾ? ತೆರಿಗೆ ಅಧಿಕಾರಿಗಳು ಮನೆ ಬಾಗಿಲಿಗೆ ಬರಬಹುದು...

Update: 2017-09-10 11:44 GMT

ಹೊಸದಿಲ್ಲಿ,ಸೆ.10: ಆದಾಯ ತೆರಿಗೆ ಇಲಾಖೆಯು ಕಪ್ಪುಹಣವನ್ನು ಪತ್ತೆ ಹಚ್ಚಲು ಸಾಮಾಜಿಕ ಮಾಧ್ಯಮಗಳಲ್ಲಿಯ ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಕಲೆ ಹಾಕುವ ಕೆಲಸವನ್ನು ಮುಂದಿನ ತಿಂಗಳಿನಿಂದ ಆರಂಭಿಸಲಿದೆ. ಹೀಗಾಗಿ ನೀವು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಹೊಚ್ಚಹೊಸ ಕಾರಿನ ಚಿತ್ರ ಅಥವಾ ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ದುಬಾರಿ ವಾಚಿನ ಚಿತ್ರ ಆದಾಯ ತೆರಿಗೆ ಅಧಿಕಾರಿಗಳು ನಿಮ್ಮ ಮನೆಬಾಗಿಲಿನಲ್ಲಿ ಪ್ರತ್ಯಕ್ಷ ರಾಗುವಂತೆ ಮಾಡಬಹುದು.

ಮುಂದಿನ ತಿಂಗಳಿನಿಂದ ಆರಂಭಗೊಳ್ಳುವ ಸಾಧ್ಯತೆಯಿರುವ ‘ಪ್ರಾಜೆಕ್ಟ್ ಇನ್‌ಸೈಟ್’ ತೆರಿಗೆದಾತರು ಘೋಷಿಸಿರುವ ಆದಾಯ ಮತ್ತು ಅವರ ಖರ್ಚುವೆಚ್ಚಗಳಲ್ಲಿಯ ವ್ಯತ್ಯಾಸವನ್ನು ಪತ್ತೆ ಹಚ್ಚಲು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿಗಳನ್ನು ಸಂಗ್ರಹಿಸಿ ಅವುಗಳನ್ನು ವಿಶ್ಲೇಷಿಸಲಿದೆ. ಕಡಿಮೆ ಆದಾಯ ಘೋಷಿಸಿರುವುದು ಮತ್ತು ತೆರಿಗೆಯನ್ನು ವಂಚಿಸಿರುವುದು ಪತ್ತೆಯಾದರೆ ಸಂಕಷ್ಟ ತಪ್ಪಿದ್ದಲ್ಲ.

ವ್ಯಕ್ತಿಯ ಆದಾಯ ಮತ್ತು ಆಸ್ತಿಗಳ ಪರಿಪೂರ್ಣ ಮಾಹಿತಿ ಪಡೆಯಲು ಸರಕಾರವು ಈಗಾಗಲೇ ಪಾನ್ ಜೊತೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿದೆ.

ಹೆಚ್ಚೆಚ್ಚು ಜನರನ್ನು ತೆರಿಗೆ ಬಲೆಯಲ್ಲಿ ಕೆಡವಲು ಪ್ರಾಜೆಕ್ಟ್ ಇನಸೈಟ್‌ನ್ನು ಜಾರಿಗೊಳಿ ಸಲು ಆದಾಯ ತೆರಿಗೆ ಇಲಾಖೆಯು ಕಳೆದ ವರ್ಷ ಎಲ್ ಆ್ಯಂಡ್ ಟಿ ಇನ್ಫೋಟೆಕ್ ಜೊತೆ ಒಪ್ಪಂದವೊಂದನ್ನು ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News