×
Ad

ನೋಟು ನಿಷೇಧದಿಂದ ಬೆಳೆಯುತ್ತಿದೆ ಸೈಬರ್ ಕ್ರೈಮ್

Update: 2017-09-10 22:41 IST

ಹೊಸದಿಲ್ಲಿ, ಸೆ. 10: ಆನ್‌ಲೈನ್ ಕಳ್ಳರು ಸಂಜಯ್ ಸಿಂಗಾಲ್ ಅವರ ಕ್ರೆಡಿಟ್ ಕಾರ್ಡ್ ತದ್ರೂಪುಗೊಳಿಸಿ 1.84 ಲಕ್ಷ ರೂಪಾಯಿಯನ್ನು 8 ನಿಮಿಷಗಳಲ್ಲಿ ಕಳವುಗೈದಿದ್ದರು. ಆ ಬಳಿಕ ಹಣ ವರ್ಗಾವಣೆ ಬಗ್ಗೆ ಎಚ್ಚರಿಸಲು ಸಂಜಯ್ ಸಿಂಗ್ ಅವರ ಮೊಬೈಲ್‌ಗೆ ಬ್ಯಾಂಕ್‌ನಿಂದ 53 ಸಂದೇಶಗಳು ಬಂದಿತ್ತು.

 ಇದೇ ರೀತಿ ಮುಂಬೈ ಮೂಲದ ಮಾಜಿ ಕಂದಾಯ ಅಧಿಕಾರಿ ಹಾಗೂ ಉದ್ಯಮಿ ಗುರ್ಗಾಂವ್‌ನ ಭಾವನಾ ಕತ್ರಿ ಅವರ ಮೊಬೈಲ್‌ಗೆ ಬ್ಯಾಂಕ್‌ನಿಂದ ಸಂದೇಶವೊಂದು ಬಂದಿತ್ತು. ಆ ಸಂದೇಶದಲ್ಲಿ ಮೇ 29ರಂದು ಕ್ರೆಡಿಟ್ ಕಾರ್ಡ್ ಬಳಸಿ 40 ಸಾವಿರ ರೂ. ಖರೀದಿ ನಡೆಸಲಾಗಿದೆ ಎಂದು ಹೇಳಲಾಗಿತ್ತು. ಅವರು ಕೂಡಲೇ ಬ್ಯಾಂಕ್‌ಗೆ ಫೋನ್ ಕರೆ ಮಾಡಿದರು. ಆದರೆ, ತುಂಬಾ ತಡವಾಗಿತ್ತು. ಅವರು 40 ಸಾವಿರ ರೂಪಾಯಿ ಕಳೆದುಕೊಂಡಾಗಿತ್ತು.

2017ರ ಮೊದಲ 6 ತಿಂಗಳಲ್ಲಿ ನಡೆದ ಸೈಬರ್ ವಂಚನೆ ಇದು. ಕಪ್ಪು ಹಣ ಮಟ್ಟಹಾಕಲು ಕಳೆದ ನವೆಂಬರ್‌ನಲ್ಲಿ ಸರಕಾರ ಅಧಿಕ ವೌಲ್ಯದ ಎರಡು ನೋಟುಗಳನ್ನು ನಿಷೇಧಿಸಿದ ಬಳಿಕ ಈ ವಂಚನೆಗಳು ಹೆಚ್ಚಾಗಿವೆ.

ನೋಟು ನಿಷೇಧದ ಬಳಿಕ ಸೈಬರ್ ಅಪರಾಧ ಬೆಳೆಯುತ್ತಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ನಮ್ಮ ದೇಶ ವಿಫಲವಾಗಿದೆ ಎಂದು ಸೈಬರ್ ತಜ್ಞ ಹಾಗೂ ಸುಪ್ರೀಂ ಕೋರ್ಟ್‌ನ ನ್ಯಾಯವಾದಿ ಪವನ್ ದುಗ್ಗಾಲ್ ಹೇಳಿದ್ದಾರೆ.

ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2017ರ ಅರ್ಧ ವರ್ಷದಲ್ಲಿ 27,000ಕ್ಕೂ ಅಧಿಕ ಸೈಬರ್ ಅಪರಾಧಗಳು ವರದಿಯಾಗಿವೆ. 2016ರಲ್ಲಿ ಈ ಸಂಖ್ಯೆ 50,362 ಇತ್ತು.

ಹೆಚ್ಚುತ್ತಿರುವ ಅಪರಾಧದ ಬಗ್ಗೆ ಸರಕಾರಕ್ಕೆ ಅರಿವಿದೆ. ಅದಕ್ಕಾಗಿ ಎಟಿಎಂ, ಕ್ರೆಡಿಟ್ ಕಾರ್ಡ್‌ನಂತಹ ಡಿಜಿಟಲ್ ವರ್ಗಾವಣೆಯನ್ನು ರಕ್ಷಿಸಲು 21 ಸಲಹೆಗಳನ್ನು ನೀಡಿದೆ. ಸೈಬರ್ ಫಂಡ್‌ನಲ್ಲಿ ತೊಂದರೆ ಉಂಟಾಗುತ್ತಿರುವ ಬಗ್ಗೆ ಸಂಸತ್ತಿನಲ್ಲಿ ಜುಲೈ-ಆಗಸ್ಟ್‌ನಲ್ಲಿ ನಡೆದ ಮಳೆಗಾಲದ ಅಧಿವೇಶನದಲ್ಲಿ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಕಿರಿಯ ಸಚಿವ ಪಿ.ಪಿ. ಚೌಧುರಿ ಮಾಹಿತಿ ನೀಡಿದ್ದರು. ಆದರೆ, ಜಗತ್ತಿನ ಇತರ ಕಡೆಗಳಲ್ಲೂ ಹೀಗೇ ಇದೆ ಎಂದಿದ್ದರು.

ಹೆಚ್ಚಾಗಿ ಎಲ್ಲ ಹಣಕಾಸು ಸಂಸ್ಥೆಗಳು, ಬ್ಯಾಂಕ್‌ಗಳು ಹಾಗೂ ಆನ್‌ಲೈನ್ ವರ್ಗಾವಣೆಗಳು ಸೈಬರ್ ಕೈಮ್‌ನಿಂದ ದುರ್ಬಲವಾಗಿವೆ. ಪೇಟಿಎಂ ಹಾಗೂ ಬೀಮ್‌ನಂತಹ ಡಿಜಿಟಲ್ ವಾಲೆಟ್‌ಗಳು ನೋಟು ನಿಷೇಧದ ಬಳಿಕ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಆದರೆ, ಇದು ಸುರಕ್ಷಿತವಲ್ಲ ಎಂದು ಐಐಟಿ ಖಾನ್‌ಪುರದ ಸಂಶೋಧನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News