ಹನಿಪ್ರೀತ್ ಇನ್ಸಾನ್ ವಿದೇಶಕ್ಕೆ ತೆರಳದಂತೆ ಕಟ್ಟೆಚ್ಚರ
Update: 2017-09-10 22:45 IST
ಹೊಸದಿಲ್ಲಿ, ಸೆ. 10: ಕಾರಾಗೃಹದಲ್ಲಿರುವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮಿತ್‌ನ ದತ್ತುಪುತ್ರಿ ಎನ್ನಲಾದ ಹನಿಪ್ರೀತ್ ಇನ್ಸಾನ್ ಭಾವಚಿತ್ರ ನೇಪಾಳ ಗಡಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಅಂಟಿಸಲಾಗಿದೆ. ನೆರೆಯ ದೇಶಗಳಿಗೆ ನುಸುಳದಂತೆ ಕಾನೂನು ಸುವ್ಯವಸ್ಥೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ನೇಪಾಳ ಗಡಿಯಲ್ಲಿರುವ ಕಪಿಲವಸ್ತು, ಮೋಹನ, ಶೊಹ್ರಾತ್‌ಘರ್, ದೇಬಾರುವಾ ಪೊಲೀಸ್ ಠಾಣೆಗಳು ಕಟ್ಟೆಚ್ಚರ ವಹಿಸಿವೆ ಎಂದು ಸಿದ್ಧಾರ್ಥ್‌ನಗರ್ ಪೊಲೀಸ್ ಅಧೀಕ್ಷಕ ಸತ್ಯೇಂದ್ರ ಕುಮಾರ್ ತಿಳಿಸಿದ್ದಾರೆ.
ಹನಿಪ್ರೀತ್‌ನ ಭಾವಚಿತ್ರಗಳನ್ನು ಈ ಪೊಲೀಸ್ ಠಾಣೆಗಳಲ್ಲಿ ಅಂಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.