×
Ad

ವಿವಾಹಿತೆಯನ್ನು ಸಾಮೂಹಿಕ ಅತ್ಯಾಚಾರಗೈದ ದುರುಳರು

Update: 2017-09-11 18:28 IST

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಬಿರ್ಭುಂ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಮೂವರು ದುರುಳರು ಆಕೆಯ ಖಾಸಗಿ ಭಾಗಕ್ಕೆ ಬಾಟಲಿ ತುರುಕಿಸಿದ ಘಟನೆ ಸೋಮವಾರ ನಡೆದಿದ್ದು ಸಂತ್ರಸ್ತೆ ಇದೀಗ ಗಂಭೀರ ಸ್ಥಿತಿಯಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆರೋಪಿ ಯುವಕರು ಮದ್ಯದ ಅಮಲಿನಲ್ಲಿ ಈ ಕೃತ್ಯ ನಡೆಸಿದ್ದಾರೆನ್ನಲಾಗಿದೆ.

ಆರೋಪಿಗಳು ಮಧ್ಯ ರಾತ್ರಿ ಕಳೆದು 1.30ರ ಸುಮಾರಿಗೆ ಸೈಂತಿಯಾ ಪ್ರದೇಶದಲ್ಲಿರುವ ಆಕೆಯ ಮನೆಗೆ ನುಗ್ಗಿ ಆಕೆಯ ಕೈಗಳನ್ನು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಆಕೆಯ ಮಾನಭಂಗ ನಡೆಸಿದ್ದರು. ಆರೋಪಿಗಳಲ್ಲೊಬ್ಬರು ಆಕೆಗೆ ತಿಳಿದಿರುವವನೆಂದು ಹೇಳಲಾಗುತ್ತಿದೆ.

ಮಹಿಳೆಯ ಅಳುವನ್ನು ಕೇಳಿ ಪಕ್ಕದ ಕೋಣೆಯಲ್ಲಿ ಮಲಗಿದ್ದ ಆಕೆಯ 13 ವರ್ಷದ ಪುತ್ರಿ ಓಡಿ ಬಂದು ಬೊಬ್ಬಿಟ್ಟರೂ ನೆರೆಹೊರೆಯವರ್ಯಾರೂ ಸಹಾಯಕ್ಕೆ ಧಾವಿಸಿಲ್ಲವೆಂದು ಆರೋಪಿಸಲಾಗಿದೆ. ಅತ್ಯಾಚಾರ ನಡೆಸಿದ ನಂತರ ಬಾಟಲಿಯನ್ನು ಖಾಸಗಿ ಭಾಗಕ್ಕೆ ಅವರು ತುರುಕಿದ್ದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಆರೋಪಿಗಳು ಕುಡಿದು ಖಾಲಿ ಮಾಡಿದ ಮದ್ಯದ ಬಾಟಲಿಯನ್ನೇ ಆಕೆಗೆ ಹಿಂಸೆ ನೀಡಲು ಉಪಯೋಗಿಸಿದ್ದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಮಹಿಳೆಗೆ ಶಸ್ತ್ರಕ್ರಿಯೆಯ ಅಗತ್ಯವಿದ್ದು ಅದಕ್ಕಾಗಿ ಆಕೆಯನ್ನು ಹೆಚ್ಚಿನ ಸೌಕರ್ಯವಿರುವ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News