×
Ad

ರೊಹಿಂಗ್ಯಾರ ವಿರುದ್ಧದ ಹಿಂಸೆ ನಿಲ್ಲಿಸಿ : ಮ್ಯಾನ್ಮಾರ್‌ಗೆ ಅಮೆರಿಕ ಕರೆ

Update: 2017-09-12 20:25 IST

ವಾಶಿಂಗ್ಟನ್, ಸೆ. 12: ಮ್ಯಾನ್ಮಾರ್‌ನಿಂದ ರೊಹಿಂಗ್ಯಾ ಮುಸ್ಲಿಮರ ಹತಾಶೆಯ ಪಲಾಯನವು ಅಲ್ಲಿನ ಸೇನೆ ತನ್ನ ನಾಗರಿಕರನ್ನು ರಕ್ಷಿಸಲು ವಿಫಲವಾಗಿದೆ ಎನ್ನುವುದನ್ನು ತೋರಿಸಿದೆ ಎಂದು ಅಮೆರಿಕ ಸೋಮವಾರ ಹೇಳಿದೆ.

‘‘ಕಾನೂನಿನ ಆಡಳಿತವನ್ನು ಗೌರವಿಸಿ, ಹಿಂಸೆಯನ್ನು ನಿಲ್ಲಿಸಿ ಮತ್ತು ಎಲ್ಲ ಸಮುದಾಯಗಳ ನಾಗರಿಕರ ಪಲಾಯನವನ್ನು ನಿಲ್ಲಿಸಿ ಎಂದು ನಾವು ಬರ್ಮದ ಭದ್ರತಾ ಅಧಿಕಾರಿಗಳಿಗೆ ಕರೆ ನೀಡುತ್ತೇವೆ’’ ಎಂದು ಶ್ವೇತಭವನ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ನಡುವೆ, ವಿಶ್ವಸಂಸ್ಥೆಯ ಉನ್ನತ ಮಾನವಹಕ್ಕುಗಳ ಅಧಿಕಾರಿ, ಮ್ಯಾನ್ಮಾರ್ ಸ್ಪಷ್ಟವಾಗಿ ರೊಹಿಂಗ್ಯಾ ಮುಸ್ಲಿಮರ ಜನಾಂಗೀಯ ನಿರ್ಮೂಲನೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.

ಸೇನೆಯ ‘ಅಮಾನುಷ’ ದಮನ ಕಾರ್ಯಾಚರಣೆ ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ ಝಾಯಿದ್ ರಆದ್ ಅಲ್-ಹುಸೈನ್ ಹೇಳಿದ್ದಾರೆ.

ವ್ಯಾಪಕವಾಗಿ ನಡೆಯುತ್ತಿರುವ ನ್ಯಾಯಾಂಗೇತರ ಹತ್ಯೆಗಳು, ಅತ್ಯಾಚಾರಗಳು ಮತ್ತು ಇತರ ರೀತಿಯ ದೌರ್ಜನ್ಯಗಳ ಬಗ್ಗೆ ನಿರಾಶ್ರಿತರು ಒಂದೇ ಸಮನೆ ನೀಡುತ್ತಿರುವ ಹೇಳಿಕೆಗಳನ್ನು ಉಲ್ಲೇಖಿಸಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News