×
Ad

ಶೀಘ್ರದಲ್ಲೇ ಬರಲಿದೆ 100 ರೂ.ನಾಣ್ಯ

Update: 2017-09-12 22:20 IST

ಹೊಸದಿಲ್ಲಿ, ಸೆ.12: ಕೇಂದ್ರ ಸರಕಾರ ಶೀಘ್ರದಲ್ಲೇ 100 ರೂ. ನಾಣ್ಯವನ್ನು ಹೊರ ತರಲಿದೆ.

ಎಐಎಡಿಎಂಕೆ ಸ್ಥಾಪಕ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಾ.ಎಂ.ಜಿ. ರಾಮಚಂದ್ರನ್ ಮತ್ತು ಗಾಯಕಿ ಡಾ.ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಜನ್ಮಶತಮಾನೋತ್ಸವದ ಅಂಗವಾಗಿ  ದೇಶದಲ್ಲೇ ಇದೇ ಮೊದಲ ಬಾರಿ ಕೇಂದ್ರ ಸರಕಾರ 100 ರೂ.ನಾಣ್ಯವನ್ನು ಹೊರತರಲು ಉದ್ದೇಶಿಸಿದೆ.ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ಅಧಿಸೂಚನೆ ಹೊರಡಿಸಿದೆ.

ಇದೇ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಡಾ.ಎಂ.ಜಿ. ರಾಮಚಂದ್ರನ್ ಮತ್ತು ಗಾಯಕಿ ಡಾ.ಎಂ.ಎಸ್. ಸುಬ್ಬು ಲಕ್ಷ್ಮೀ ಗೌರವಾರ್ಥವಾಗಿ 5 ರೂ. ಮತ್ತು 10 ರೂ. ನಾಣ್ಯವನ್ನು ಹೊರತರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News