ಇ್ರಮಾನ್ ಖಾನ್ ವಿರುದ್ಧ ಬಂಧನ ವಾರಂಟ್
Update: 2017-09-14 23:18 IST
ಇಸ್ಲಾಮಾಬಾದ್, ಸೆ. 14: ನ್ಯಾಯಾಂಗ ನಿಂದನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಪಾಕಿಸ್ತಾನದ ಚುನಾವಣಾ ಆಯೋಗವು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.
ಇಮ್ರಾನ್ ವಿರುದ್ಧ ಪಕ್ಷದ ಭಿನ್ನಮತೀಯ ನಾಯಕ ಅಕ್ಬರ್ ಎಸ್. ಬಾಬರ್ ಸಲ್ಲಿಸಿದ ದೂರೊಂದರ ವಿಚಾರಣೆಯನ್ನು ಚುನಾವಣಾ ಆಯೋಗ ನಡೆಸುತ್ತಿತ್ತು. ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ಇಮ್ರಾನ್‌ಗೆ ಸೂಚನೆ ನೀಡಿದರೂ ಅವರು ನಿರ್ಲಕ್ಷಿಸಿದ್ದರು.
ಗುರುವಾರವೂ ಇಮ್ರಾನ್ ಗೈರುಹಾಜರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.