ಜಮ್ಮು; ಪಾಕ್‌ನಿಂದ ಕದನವಿರಾಮ ಉಲ್ಲಂಘನೆ: ಓರ್ವ ಯೋಧ ಹುತಾತ್ಮ
Update: 2017-09-16 19:03 IST
ಹೊಸದಿಲ್ಲಿ, ಸೆ.16: ಜಮ್ಮುವಿನ ಅರ್ನಿಯ ಕ್ಷೇತ್ರದಲ್ಲಿ ಪಾಕಿಸ್ತಾನ ಪಡೆಗಳು ಕದನವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಯಲ್ಲಿ ಗಡಿಭದ್ರತಾ ಪಡೆಯ ಓರ್ವ ಯೋಧ ಮೃತಪಟ್ಟಿದ್ದು ಓರ್ವ ಸ್ಥಳೀಯ ವ್ಯಕ್ತಿ ಗಾಯಗೊಂಡಿದ್ದಾನೆ.
ಶನಿವಾರ ಮಧ್ಯಾಹ್ನದ ವೇಳೆ ಈ ಘಟನೆ ನಡೆದಿದೆ. ಪಾಕಿಸ್ತಾನದ ಗಡಿಭದ್ರತಾ ಪಡೆಯ ಯೋಧರು ಮಾರ್ಟರ್ ಶೆಲ್‌ಗಳಿಂದ ನಡೆಸಿದ ದಾಳಿಯಲ್ಲಿ ಗಡಿಬೇಲಿಯ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಯೋಧ ಬಿಜೇಂದರ್ ಬಹಾದುರ್ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದಾರೆ. ಸ್ಥಳೀಯ ವ್ಯಕ್ತಿ ಗಾಯಗೊಂಡಿದ್ದಾನೆ.
ಬಿಎಸ್‌ಎಫ್ ಪಡೆ ಪ್ರತಿದಾಳಿ ನಡೆಸಿದ್ದು ಸಂಜೆಯವರೆಗೂ ಉಭಯ ಪಡೆಗಳಿಂದ ಗುಂಡಿನ ದಾಳಿ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.