×
Ad

ಮ್ಯಾನ್ಮಾರ್‌ನ ರೊಹಿಂಗ್ಯಾರಿಗೆ ಎಲ್ಲ ರೀತಿಯ ನೆರವು ವಿಸ್ತರಣೆ: ಅಮಿತ್ ಶಾ

Update: 2017-09-17 22:09 IST

ಹೊಸದಿಲ್ಲಿ, ಸೆ. 17: ಮ್ಯಾನ್ಮಾರ್‌ನಲ್ಲಿ ವಾಸಿಸುತ್ತಿರುವ ರೊಹಿಂಗ್ಯಾರಿಗೆ ಎಲ್ಲ ರೀತಿಯ ಬೆಂಬಲ ವಿಸ್ತರಿಸುವ ಇಚ್ಛೆಯನ್ನು ಕೇಂದ್ರ ಸರಕಾರ ಹೊಂದಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಾಂಚಿಯಲ್ಲಿ ಶನಿವಾರ ಹೇಳಿದ್ದಾರೆ.

ಮೂರು ದಿನಗಳ ಪ್ರವಾಸದ ವೇಳೆ ಜಾರ್ಖಂಡ್‌ನ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಮಿತ್ ಶಾ ಮಾತನಾಡಿದರು.

  ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾರಿಗೆ ಎಲ್ಲ ರೀತಿಯ ಬೆಂಬಲ ವಿಸ್ತರಿಸುವ ಇಚ್ಛೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹೊಂದಿರುವುದಾಗಿ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಮ್ಯಾನ್ಮಾರ್‌ನಿಂದ ಭಾರತಕ್ಕೆ ಬಂದಿರುವ ರೊಹಿಂಗ್ಯಾರ ಕುರಿತ ನಿಲುವಿನ ಬಗ್ಗೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಅಫಿದಾವಿತ್ ಸಲ್ಲಿಸಲಿದೆ ಎಂದು ಅಮಿತ್ ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News