×
Ad

ರೊಹಿಂಗ್ಯಾ ನಿರಾಶ್ರಿತ ಶಿಬಿರದಲ್ಲಿ ಕಾಲ್ತುಳಿತ: ಮಹಿಳೆ, ಇಬ್ಬರು ಮಕ್ಕಳು ಮೃತ್ಯು

Update: 2017-09-17 23:10 IST

ಕುಟುಪಲೊಂಗ್,ಸೆ.17: ಇಲ್ಲಿಗೆ ಸಮೀಪದ ರೊಹಿಂಗ್ಯ ನಿರಾಶ್ರಿತ ಶಿಬಿರದಲ್ಲಿ ಆಹಾರ ಹಾಗೂ ಬಟ್ಟೆ ವಿತರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆಂದು ನೆರವು ಸಂಸ್ಥೆಗಳು ಶನಿವಾರ ಬಹಿರಂಗಪಡಿಸಿವೆ.

 ಕುಟುಪಲೊಂಗ್ ನಿರಾಶ್ರಿತ ಶಿಬಿರದ ಸಮೀಪದ ಬಾಲುಖಾಲಿ ಪಾನ್ ಬಝಾರ್ ಸಮೀಪದ ರಸ್ತೆಯಲ್ಲಿ ಶುಕ್ರವಾರ ಟ್ರಕ್‌ಗಳಿಂದ ಪರಿಹಾರ ಸಾಮಾಗ್ರಿಗಳನ್ನು ನಿರಾಶ್ರಿತರೆಡೆಗೆ ಎಸೆದಾಗ ಕಾಲ್ತುಳಿತ ಸಂಭವಿಸಿರುವುದಾಗಿ ಐಎಸ್‌ಸಿಜಿ ನೆರವು ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News