ದಾವೂದ್ ಇಬ್ರಾಹೀಂ ಸಹೋದರ ಇಕ್ಬಾಲ್ ಬಂಧನ
Update: 2017-09-18 22:58 IST
ಮುಂಬೈ, ಸೆ.18: ಭೂಗತ ಪಾತಕಿ ದಾವೂದ್ ಇಬ್ರಾಹೀಂ ಸಹೋದರ ಇಕ್ಬಾಲ್ ಕಸ್ಕರ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಎನ್ ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ನೇತೃತ್ವದ ನೇತೃತ್ವದ ಮುಂಬೈನ ಥಾಣೆ ಪೊಲೀಸರ ತಂಡ ಬಂಧಿಸಿದೆ.
ಉದ್ಯಮಿಯೊಬ್ಬರ ಸುಲಿಗೆ ಆರೋಪದಲ್ಲಿ ಇಕ್ಬಾಲ್ ಕಸ್ಕರ್ ನನ್ನು ಪೊಲೀಸರು ಬಂಧಿಸಿದ್ದಾರೆ. 2003ರಲ್ಲಿ ಇಕ್ಬಾಲ್ ನ್ನು ಯುಎಇಯಿಂದ ಗಡಿಪಾರು ಮಾಡಲಾಗಿತ್ತು.