‘ನೇಮೊದ ಬೂಳ್ಯ’ ತುಳು ಸಿನೆಮಾ ಸೆ.22ರಂದು ತೆರೆಗೆ

Update: 2017-09-20 11:40 GMT

ಉಡುಪಿ, ಸೆ.20: ಭೂತಾರಾಧನೆ ಸಂಬಂಧಪಟ್ಟ ಪರತಿ ಮಂಗಣೆ ಪಾಡ್ದನ ಆಧಾರಿತ ನೇಮೊದ ಬೂಳ್ಯ ತುಳು ಚಲನಚಿತ್ರವು ಕರಾವಳಿಯ ಜಿಲ್ಲೆಯಾ ದ್ಯಂತ ಸೆ.22ರಂದು ತೆರೆಕಾಣಲಿದೆ.

ಕುದ್ರಾಡಿ ಕುಲದೇವತಾ ಕ್ರಿಯೇಷನ್ಸ್ ಲಾಂಛನದಲ್ಲಿ ಶಬರಿ ಚಂದ್ರಶೇಖರ್ ರ್ಪಿಸುವ ಬಿ.ಕೆ.ಗಂಗಾಧರ ಕಿರೋಡಿಯನ್ ನಿರ್ದೇಶನದ ನೇಮೊದ ಬೂಳ್ಯ ಸತ್ಯ ಘಟನೆಯಾಧರಿಸಿದ ನಾಟಕವಾಗಿದ್ದು ಈಗ ಅದನ್ನು ನಿರ್ಮಾಪಕ ಕುದ್ರಾಡಿ ಗುತ್ತು ಚಂದ್ರಶೇಖರ ಮಾಡ ಸಿನಿಮಾವನ್ನಾಗಿ ಪರಿವರ್ತಿಸಿದ್ದಾರೆ ಎಂದು ಪ್ರತಿಮಾ ನಾಯಕ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಬಿ.ಕೆ.ಗಂಗಾಧರ್ ಕಥೆ, ಚಿತ್ರಕಥೆ, ಸಂಬಾಷಣೆ ಬರೆದು ಚಿತ್ರ ನಿರ್ದೇಶಿಸಿ ದ್ದಾರೆ. 200 ವರ್ಷಗಳ ಹಿಂದೆ ಪುತ್ತೂರಿನ ಬೆಟ್ಟಂಪಾಡಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿ ಪರತಿ ಮಂಗಣೆ ಪಾಡ್ದನವನ್ನು ಸಿನೆಮಾ ರೂಪಕ್ಕೆ ಇಳಿಸ ಲಾಗಿದೆ. ವಿ.ಮನೋಹರ್ ಸಂಗೀತ ಮತ್ತು ಸಾಹಿತ್ಯ ಒದಗಿಸಿದ್ದಾರೆ, ಉಮಾ ಪತಿ ಬೆಂಗಳೂರು ಕ್ಯಾಮರಾ, ಪ್ರಕಾಶ್ ಕಾರಿಂಜ ಸಂಕಲನವಿದ್ದು, ಪ್ರತಾಪ್ ಸಾಲ್ಯಾನ್ ಕದ್ರಿ ಸಹನಿರ್ದೇಶಕರಾಗಿದ್ದಾರೆ ಎಂದರು.

ಸಿನೆಮಾದಲ್ಲಿ ಪ್ರೀತಂ ಶೆಟ್ಟಿ, ಕಿರುತೆರೆ ನಟಿ ರಜನಿ, ಪ್ರದೀಪ್‌ಚಂದ್ರ ಕುತ್ಪಾಡಿ ಮುಖ್ಯ ಪಾತ್ರದಲ್ಲಿದ್ದಾರೆ. 30ಲಕ್ಷ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸಿನೆಮಾದಲ್ಲಿ 200ವರ್ಷಗಳ ಹಿಂದಿನ ತುಳು ಭಾಷೆಯನ್ನು ಬಳಸಿಕೊಳ್ಳ ಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಬಿ.ಕೆ.ಗಂಗಾಧರ, ನಟರಾದ ಶ್ರೀಪಾದ್ ಹೆಗಡೆ, ಪವಿತ್ರಾ ಶೆಟ್ಟಿ, ಪ್ರೀತಂ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News