ತ್ರಿಪುರಾ ಪತ್ರಕರ್ತನ ಹತ್ಯೆ ಅಮಾನವೀಯ: ಮಾಧ್ಯಮ ರಂಗ

Update: 2017-09-21 13:08 GMT

ಹೊಸದಿಲ್ಲಿ,ಸೆ.21: ತ್ರಿಪುರಾದ ಟಿವಿ ಪತ್ರಕರ್ತ ಶಂತನು ಭೌಮಿಕ್ ಅವರ ಹತ್ಯೆಯನ್ನು ಗುರುವಾರ ತೀವ್ರವಾಗಿ ಖಂಡಿಸಿರುವ ಮಾಧ್ಯಮ ರಂಗವು, ಇದು ಪತ್ರಿಕಾ ಸ್ವಾತಂತ್ರದ ಧ್ವನಿಯನ್ನಡಗಿಸಲು ನಡೆಸಿದ ವಿವೇಚನಾರಹಿತ ಮತ್ತು ಅಮಾನವೀಯ ಕೃತ್ಯವಾಗಿದೆ ಎಂದು ಹೇಳಿದೆ.

ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಇಂಡಿಯನ್ ವಿಮೆನ್ಸ್ ಪ್ರೆಸ್ ಕಾರ್ಪ್ಸ್, ಪ್ರೆಸ್ ಅಸೋಸಿಯೇಷನ್, ಫೆಡರೇಷನ್ ಆಫ್ ಪ್ರೆಸ್ ಕ್ಲಬ್ಸ್ ಮತ್ತು ನಾರ್ಥ್ ಈಸ್ಟ್ ಮೀಡಿಯಾ ಫೋರಂ ಜಂಟಿ ಹೇಳಿಕೆಯೊಂದನ್ನು ಹೊರಡಿಸಿ ಘಟನೆಯ ಬಗ್ಗೆ ತ್ವರಿತ ತನಿಖೆಗೆ ಆಗ್ರಹಿಸಿವೆ.

ಬುಧವಾರ ಪಶ್ಚಿಮ ತ್ರಿಪುರಾದ ಮಂಡೈ ಪ್ರದೇಶದಲ್ಲಿ ಇಂಡಿಜಿನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ಮತ್ತು ಸಿಪಿಎಂನ ಬುಡಕಟ್ಟು ಘಟಕ ತ್ರಿಪುರಾ ರಾಜ್ಯ ಉಪಜಾತಿ ಗಣಮುಕ್ತಿ ಪರಿಷದ್ ನಡುವೆ ನಡೆದ ಘರ್ಷಣೆಗಳನ್ನು ವರದಿ ಮಾಡಲು ತೆರಳಿದ್ದ ಭೌಮಿಕ್‌ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News