ಆಸ್ಕರ್ಸ್ ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ‘ನ್ಯೂಟನ್’

Update: 2017-09-22 09:28 GMT

ಹೊಸದಿಲ್ಲಿ, ಸೆ.22: ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಅಭಿನಯದ ಚಲನಚಿತ್ರ ‘ನ್ಯೂಟನ್’ ಆಸ್ಕರ್ಸ್ ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ.

“ಈ ವರ್ಷದ ಆಸ್ಕರ್ಸ್ ಗೆ ‘ನ್ಯೂಟನ್’ ಭಾರದತದಿಂದ ಅಧಿಕೃತ ಪ್ರವೇಶ ಪಡೆದಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ತಂಡಕ್ಕೆ ಅಭಿನಂದನೆಗಳು” ಎಂದು ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಅಮಿತ್ ವಿ. ಮಸೂರ್ಕರ್ ನಿರ್ದೇಶನದ ಈ ಚಿತ್ರದಲ್ಲಿ ರಾಜ್ ಕುಮಾರ್ ರಾವ್, ಪಂಕಜ್ ತ್ರಿಪಾಠಿ, ಅಂಜಲಿ ಪಾಟಿಲ್, ರಘುವೀರ್ ಯಾದವ್ ಹಾಗೂ ಸಂಜಯ್ ಮಿಶ್ರಾ ನಟಿಸಿದ್ದಾರೆ.

ಕಳೆದ ಶುಕ್ರವಾರವಷ್ಟೇ ಬಿಡುಗಡೆಗೊಂಡಿದ್ದ ನ್ಯೂಟನ್ ಚಿತ್ರ ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಛತ್ತೀಸ್ ಗಡದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಸರಕಾರಿ ನೌಕರನೊಬ್ಬನ ಸಾಹಸದ ಕಥೆಯನ್ನು ಈ ಚಿತ್ರ ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News