100 ದಿವಸದೊಳಗೆ ಚುನಾವಣೆ ನಡೆದರೆ ಸ್ಪರ್ಧಿಸುವೆ: ಕಮಲ್‍ಹಾಸನ್

Update: 2017-09-22 12:13 GMT

ಚೆನ್ನೈ,ಸೆ. 22: ರಾಜಕೀಯಕ್ಕೆ ಬರುವ ಸಿದ್ಧತೆಯಲ್ಲಿ ಸಕ್ರಿಯವಾಗಿರುವ ‘ಉಳಗನಾಯಗನ್’ ಕಮಲ್‍ಹಾಸನ್ ಮುಂದಿನ ನೂರುದಿವಸಗಳೊಳಗೆ ಚುನಾವಣೆ ನಡೆದರೆ ತಾನು ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.

ಆದರೆ, ಈಗಿನ ಯಾವುದೇ ಪಕ್ಷದೊಂದಿಗೆ ಸೇರಿ ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

“ಎಲ್ಲ ರಾಜಕೀಯ ಪಕ್ಷಗಳಿಗೂ ಸಹಕರಿಸುವೆ. ಆದರೆ ,ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಒಂಟಿಯಾಗಿಯೇ ಮುಂದುವರಿಯುವೆ. ಇತ್ತೀಚೆಗೆ  ರಜನೀಕಾಂತ್ ಜೊತೆ ಮಾತುಕತೆ ನಡೆಸಿದ್ದೇನೆ. ನಾವಿಬ್ಬರೂ ಒಂದೇ ಗುರಿಯನ್ನು ಹೊಂದಿದವರೆಂದು” ಕಮಲ್‍ಹಾಸನ್ ಹೇಳಿದರು.

“ಭ್ರಷ್ಟಾಚಾರದೊಂದಿಗೆ ಹೋರಾಡುತ್ತೇನೆ. ಆದರೆ ಭಿನ್ನದಾರಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ರಜನಿಗೆ ಬೇರೊಂದು ದಾರಿಯಿರಬಹುದು. ಅದರ ಕುರಿತು  ನಾವು ಚರ್ಚಿಸಿಲ್ಲ” ಎಂದು ಕಮಲ್ ಹಾಸನ್ ಹೇಳಿದರು. ಎಐಡಿಎಂಕೆಯ ಒಳಜಗಳದಲ್ಲಿ ತನಗೆ ಆಸಕ್ತಿಯಿಲ್ಲ. ಮುಂದಿನ ಮೂರು ದಿವಸಗಳಲ್ಲಿ ಒಂದು ಚುನಾವಣೆ ಬಂದರೆ ಬಲವಂತದಿಂದ ಮದುವೆ ಮಾಡಿಸಿದ ಒಂದು ಹುಡುಗಿಯ ಸ್ಥಿತಿಯಂತೆ ತಮಿಳರ ಅವಸ್ಥೆಯಾಗಲಿದೆ ಎಂದು ಕಮಲ್ ಹೇಳಿದರು.

ಈ ಹಿಂದೆಕೇರಳ ಮುಖ್ಯಮಂತ್ರಿ  ಪಿಣರಾಯಿ ವಿಜಯನ್‍ರನ್ನು ಕಮಲ್ ಹಾಸನ್ ಭೇಟಿಯಾಗಿದ್ದರೆ, ನಿನ್ನೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಮಲ್ ಹಾಸನ್‍ರನ್ನು  ಭೇಟಿಯಾಗಿದ್ದಾರೆ.  ರಾಜಕೀಯ ಪ್ರವೇಶದ ಕುರಿತು ಊಹಾಪೋಹ ಇರುವಂತೆಯೇ ಕಮಲ್ ಇಬ್ಬರನ್ನೂ ಭೇಟಿಯಾಗಿದ್ದಾರೆ.  ಇತ್ತೀಚೆಗೆ ರಾಜಕೀಯ ಪ್ರವೇಶದ ಸೂಚನೆಯನ್ನು ರಾಜನೀಕಾಂತ್ ಕೂಡಾ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News