×
Ad

ಅತ್ಯಾಚಾರ ಪ್ರಕರಣ: ನಿರ್ಮಾಪಕ ಮೊರಾನಿಯ ಜಾಮೀನು ಅರ್ಜಿ ವಜಾ

Update: 2017-09-22 17:56 IST

ಹೊಸದಿಲ್ಲಿ,ಸೆ.22: ಅತ್ಯಾಚಾರ ಪ್ರಕರಣದಲ್ಲಿ ತನ್ನ ಜಾಮೀನನ್ನು ರದ್ದುಗೊಳಿಸಿರುವ ಹೈದರಾಬಾದ್ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಬಾಲಿವುಡ್ ನಿರ್ಮಾಪಕ ಕರೀಂ ಮೊರಾನಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರೆದುರು ಶರಣಾಗುವಂತೆ ಮುಖ್ಯ ನ್ಯಾಯಾಧೀಶ ದೀಪಕ ಮಿಶ್ರಾ ನೇತೃತ್ವದ ಪೀಠವು ಮೊರಾನಿಗೆ ನಿರ್ದೇಶ ನೀಡಿತು.

ಅತ್ಯಾಚಾರ ಪ್ರಕರಣದಲ್ಲಿ ಮೊರಾನಿಯ ಜಾಮೀನನ್ನು ರದ್ದುಗೊಳಿಸಿದ್ದ ಸೆಷನ್ಸ್ ನ್ಯಾಯಾಲಯದ ನಿರ್ಧಾರವನ್ನು ಹೈದರಾಬಾದ್ ಉಚ್ಚ ನ್ಯಾಯಾಲಯವು ಸೆ.5ರಂದು ಎತ್ತಿ ಹಿಡಿದಿತ್ತು.

2ಜಿ ಹಗರಣ ಪ್ರಕರಣದಲ್ಲಿಯೂ ಆರೋಪಿಯಾಗಿರುವ ಮೊರಾನಿ ತಾನು ಆ ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸುತ್ತಿರುವ ಮತ್ತು ಹಲವಾರು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದ ವಿಷಯ ಮುಚ್ಚಿಟ್ಟಿದ್ದನ್ನು ಸೆಷನ್ಸ್ ನ್ಯಾಯಾಲಯವು ಗಂಭೀರ ವಾಗಿ ಪರಿಗಣಿಸಿತ್ತು.

ಮೊರಾನಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ಆರೋಪಿಸಿ ಚಿತ್ರನಟಿಯಾಗಲು ಬಯಸಿದ್ದ ಯುವತಿಯೋರ್ವಳು ನೀಡಿದ್ದ ದೂರಿನ ಮೇರೆಗೆ ಈ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News