'ದಳಪತಿ' ಆಡಿಯೊ ಸಿಡಿ ಬಿಡುಗಡೆ

Update: 2017-09-23 07:55 GMT

ಪ್ರಶಾಂತ್ ರಾಜ್ ತಮ್ಮ ನಿರ್ದೇಶನದ 'ಜೂಮ್' ಬಳಿಕ ಕೈಗೆತ್ತಿಕೊಂಡಿರುವ 'ದಳಪತಿ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಶಾಂಗ್ರಿಲಾ ಹೋಟೆಲ್ ನಲ್ಲಿ ನೆರವೇರಿತು.

"ದಳಪತಿ ನನ್ನ ಐದನೇ ಚಿತ್ರ. ಇದುವರೆಗೆ ಲವ್ ಸ್ಟೋರಿ, ಹಾರರ್ ಚಿತ್ರಗಳನ್ನು ಮಾಡಿದ್ದೇನೆ. ಲವ್ ಗುರು ಬಳಿಕ ಹೆಚ್ಚು ಕತೆ ಹೇಳುವಂಥ ಚಿತ್ರ ಇದು. ಫಸ್ಟ್ ಹಾಫ್ ಮತ್ತು ಸೆಕೆಂಡ್ ಹಾಫಲ್ಲಿ ಎಂಬಂತೆ ನಾಯಕನಿಗೆ ಎರಡೆರಡು ಶೇಡ್ಸ್ ಇರುತ್ತವೆ. ದಳಪತಿ ಎಂದರೆ ವಾರ್ ಫಾರ್ ಲವ್" ಎಂದು ವಿವರಿಸುತ್ತಾರೆ ನಿರ್ದೇಶಕ ಪ್ರಶಾಂತ್ ರಾಜ್.

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಖ್ಯಾತಿಯ ಚರಣ್ ಸಂಗೀತ ನಿರ್ದೇಶಕ. ಒಟ್ಟು 6 ಹಾಡುಗಳಿವೆ. ಇದು "2ಗಂಟೆ 20ನಿಮಿಷದ ಚಿತ್ರ. ಕಲಾಸಿ ಪಾಳ್ಯ ಮಾರ್ಕೆಟ್ ನಲ್ಲಿ ಜ್ವರದಲ್ಲಿಯೂ ಮಳೆಯಲ್ಲಿ ಹೊಡೆದಾಟದ ದೃಶ್ಯಗಳಿತ್ತು. ಅದರಲ್ಲಿ ಯಾವುದೇ ನಿರಾಕಣೆಗಳಿಲ್ಲದೆ  ಪಾಲ್ಗೊಂಡ ಬಗ್ಗೆ ನಿರ್ದೇಶಕರಿಂದ ನಾಯಕ ಪ್ರೇಮ್ ಗೆ ಕೃತಜ್ಞತೆಗಳ ಸಮರ್ಪಣೆಯಾಯಿತು.

ನಾಯಕ ನೆನಪಿರಲಿ ಪ್ರೇಮ್ ಮಾತನಾಡಿ, "ಆರಂಭದಿಂದಲೂ ಹಾಡುಗಳು ಚೆನ್ನಾಗಿ ಬಂದಿವೆ ಎನ್ನುವುದು ಖುಷಿಯ ವಿಚಾರ. ಹಾಡುಗಳಿಗೆ ದೊಡ್ಡ ಮಟ್ಟದ ಖರ್ಚು ಮಾಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚೆನ್ನಾಗಿದೆ. ನಾನು ನನ್ನ ಫ್ಯಾನ್ಸ್ ಗೆ ಇಲ್ಲಿಯವರೆಗೆ ಒಂದು ಟೀ ‌ಕೂಡ ಕೊಡಿಸಿಲ್ಲ. ಆದರೂ ಸೋಲು ಗೆಲುವಲ್ಲಿ ಜೊತೆಗಿದ್ದರು. ಇದು ನನ್ನ 23ನೇ ಚಿತ್ರ. ಮುಂದಿನ‌ ತಿಂಗಳು ಚಿತ್ರ ಬಿಡುಗಡೆ" ಎಂದರು.

ಸಂಗೀತ ನಿರ್ದೇಶಕ ಚರಣ್, "ಈಗ ಇದು ನಾಲ್ಕನೇ ಚಿತ್ರವಾದರೂ ಕೆಲಸ ಶುರು ಮಾಡಿದ ಮೊದಲ ಚಿತ್ರ ಇದು. ಛಾಲೆಜಿಂಗ್ ಇತ್ತು. ಹಾಡುಗಳನ್ನು ಪವನ್ ಒಡೆಯರ್, ಕೃಷ್ಣೇಗೌಡರು, ಕವಿರಾಜ್ ಬರೆದಿದ್ದಾರೆ. ಎರಡು ಹಾಡು ವಿಜಯ್ ಪ್ರಕಾಶ್ ಹಾಡಿದ್ದು, ಅವರೊಂದಿಗೆ ಹೊಸಬರ ತಂಡವಿದೆ" ಎಂದರು.

ಆನಂದ್ ಆಡಿಯೋ ಶ್ಯಾಮ್ ನಿರ್ದೇಶಕರಿಗೆ ಒಳ್ಳೆಯ ಪ್ಲ್ಯಾನ್ ಇರುವುದಾಗಿ ಅಭಿಪ್ರಾಯ ಪಟ್ಟರು.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News