ಸಿಇಎ ಅರವಿಂದ್ ಸುಬ್ರಮಣಿಯನ್ ಅಧಿಕಾರಾವಧಿ ವಿಸ್ತರಣೆ

Update: 2017-09-23 15:22 GMT

ಹೊಸದಿಲ್ಲಿ, ಸೆ. 23: ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರ ಅಧಿಕಾರಾವಧಿಯನ್ನು ಹಣಕಾಸು ಸಚಿವರು ಶನಿವಾರ ವಿಸ್ತರಿಸಿದ್ದಾರೆ. ಈ ತಿಂಗಳಾಂತ್ಯದ ವರೆಗೆ ಮಾತ್ರ ಅವರ ಅಧಿಕಾರಾವಧಿ ಇತ್ತು.

2014 ಅಕ್ಟೋಬರ್ 16ರಂದು ಮೂರು ವರ್ಷಗಳ ಅವಧಿಗೆ ಅವರು ಅಧಿಕಾರ ಸ್ವೀಕರಿಸಿದ್ದರು. ಈ ವಿಸ್ತರಣೆಯಿಂದ ಅವರ ಅಧಿಕಾರಾವಧಿ 2018 ಅಕ್ಟೋಬರ್‌ನಲ್ಲಿ ಕೊನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News