ನಮ್ಮ ಆದ್ಯತೆ ಅಭಿವೃದ್ಧಿಗೆ, ಓಟಿಗಲ್ಲ: ಪ್ರಧಾನಿ
ವಾರಣಾಸಿ, ಸೆ. 23: ನಾವು ದೇಶದ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತೇವೆ. ಆದುದರಿಂದ ರಾಜಕೀಯ ನಮಗೆ ಮತ ಗಳಿಸುವ ದಾರಿ ಅಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಶನಿವಾರ ತನ್ನ ರಾಜಕೀಯ ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಶು ಆರೋಗ್ಯ ಮೇಳ ಉದ್ಘಾಟಿಸಿದ ಬಳಿಕ ಸಾರ್ವಜನಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಅಪ್ರಾಮಾಣಿಕರು ಲೂಟಿ ಮಾಡುತ್ತಿರುವುದರಿಂದ ತನ್ನ ಸರಕಾರ ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿತು. ಇದರಿಂದ ಬಡವರು ತೊಂದರೆಗೊಳಗಾಗಬೇಕಾಯಿತು. ನಮ್ಮ (ಬಿಜೆಪಿ) ರಾಜಕೀಯ ಓಟಿಗಾಗಿ ಅಲ್ಲ. ನಮ್ಮ ಸಂಸ್ಕೃತಿ ವಿಭಿನ್ನ. ರಾಜಕೀಯದಲ್ಲಿ ಜನರಿಂದ ಓಟು ಪಡೆಯುವುದೇ ಗುರಿ. ಆದರೆ, ನಮ್ಮ ವ್ಯಕ್ತಿತ್ವ ಭಿನ್ನ ಎಂದು ಅವರು ಹೇಳಿದರು.
ಕೆಲವು ರಾಜಕಾರಣಿಗಳು ಓಟು ಪಡೆಯಲು ಕಾರ್ಯ ನಿರ್ವಹಿಸುತ್ತಾರೆ. ಆದರೆ, ನಾವು ಭಿನ್ನ ಸಂಸ್ಕೃತಿಯಲ್ಲಿ ಬೆಳೆದು ಬಂದವರು. ನಮಗೆ ಎಲ್ಲದಕ್ಕಿಂತಲೂ ಮುಖ್ಯ ದೇಶ. ದೇಶಕ್ಕೆ ಮೊದಲ ಆದ್ಯತೆ. ಮತಕ್ಕೆ ಅಲ್ಲ ಎಂದು ಮೋದಿ ಹೇಳಿದರು.