ಅಂಗವಿಕಲೆ ಮೇಲೆ ಅತ್ಯಾಚಾರ: ಸ್ವಘೋಷಿತ ದೇವಮಾನವ ಬಂಧನ
Update: 2017-09-23 21:57 IST
ಮಥುರಾ, ಸೆ. 23: ಉತ್ತರಪ್ರದೇಶದ ಮಥುರಾ ಜಿಲ್ಲೆಯಲ್ಲಿರುವ ಆಶ್ರಮದಲ್ಲಿ ಅಂಗವಿಕಲ ಶಿಷ್ಯೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಸ್ವಘೋಷಿದ ದೇವಮಾನವನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿ ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದು, ಕಳೆದ ಕೆಲವು ತಿಂಗಳಿಂದ ಬರ್ಸಾನ ಜಿಲ್ಲೆಯಲ್ಲಿರುವ ಆಶ್ರಮದಲ್ಲಿ ವಾಸಿಸುತ್ತಿದ್ದರು.
ಬಾಬಾ ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ. ನಾನು ಗರ್ಭಿಣಿಯಾದಾಗ ತನ್ನನ್ನು ಆಶ್ರಮದಿಂದ ಹೊರ ಹಾಕಿದ ಎಂದು ಸಂತ್ರಸ್ತೆ ಹೇಳಿದ್ದಾರೆ.
ಪಶ್ಚಿಮಬಂಗಾಳ ಪೊಲೀಸರ ತಂಡ ಸ್ಥಳೀಯ ಪೊಲೀಸರೊಂದಿಗೆ ಗುರುವಾರ ರಾತ್ರಿ ಆಶ್ರಮಕ್ಕೆ ತೆರಳಿ ಸ್ವಘೋಷಿತ ದೇವ ಮಾನವನನ್ನು ಬಂಧಿಸಿದ್ದಾರೆ.