ಮೆಕ್ಸಿಕೊ: ಇನ್ನೊಂದು ಪ್ರಬಲ ಭೂಕಂಪ

Update: 2017-09-23 17:41 GMT

ಮೆಕ್ಸಿಕೊ ಸಿಟಿ, ಸೆ. 23: ವಿನಾಶಕಾರಿ ಭೂಕಂಪ ನಡೆದ ಕೆಲವೇ ದಿನಗಳ ಬಳಿಕ ಶನಿವಾರ ಮಧ್ಯ ಮೆಕ್ಸಿಕೊದಲ್ಲಿ ರಿಕ್ಟರ್ ಮಾಪಕದಲ್ಲಿ 6.2ರ ತೀವ್ರತೆ ಹೊಂದಿರುವ ಇನ್ನೊಂದು ಭೂಕಂಪ ಸಂಭವಿಸಿದೆ ಎಂದು ಮೆಕ್ಸಿಕೊ ಮತ್ತು ಅಮೆರಿಕದ ಭೂಕಂಪ ಅಧ್ಯಯನ ಕೇಂದ್ರಗಳು ಹೇಳಿವೆ.

ಭೂಕಂಪದ ಕೇಂದ್ರ ಬಿಂದು ಓಕ್ಸಕ ರಾಜ್ಯದ ಮಟಿಯಸ್ ರೊಮರೊ ನಗರದಿಂದ ಆಗ್ನೇಯಕ್ಕೆ 19.3 ಕಿ.ಮೀ. ದೂರದಲ್ಲಿತ್ತು ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ತಿಳಿಸಿದೆ.

ಮೆಕ್ಸಿಕೊದ ಭೂಕಂಪ ಅಧ್ಯಯನ ಕೇಂದ್ರವೂ ಇದೇ ಮಾಹಿತಿಯನ್ನು ನೀಡಿದೆ.

ಮಂಗಳವಾರ ಮೆಕ್ಸಿಕೊದಲ್ಲಿ ಸಂಭವಿಸಿದ 7.1ರ ತೀವ್ರತೆಯ ಭೀಕರ ಭೂಕಂಪದಲ್ಲಿ ಸುಮಾರು 300 ಮಂದಿ ಮೃತಪಟ್ಟಿದ್ದಾರೆ. ಧರೆಗುರುಳಿದ ಕಟ್ಟಡಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವವರನ್ನು ರಕ್ಷಿಸು ಕಾರ್ಯ ಈಗಲೂ ನಡೆಯುತ್ತಿದೆ.

ಅದೇ ವೇಳೆ, ಹೊಸದಾಗಿ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ, ಮೆಕ್ಸಿಕೊ ಸಿಟಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ ತಮ್ಮ ಕಾರ್ಯ ನಿಲ್ಲಿಸಿದ್ದಾರೆ.

ಆದಾಗ್ಯೂ, ಹೊಸ ಭೂಕಂಪವು ರಾಜಧಾನಿಯಲ್ಲಿ ಪರಿಣಾಮ ಬೀರಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News