ಧೋನಿ, ದ್ರಾವಿಡ್ ನಾಯಕತ್ವದ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

Update: 2017-09-25 05:24 GMT

ಇಂದೋರ್, ಸೆ.25: ದಿಲ್ಲಿ ಬ್ಯಾಟ್ಸ್‌ಮನ್ ವಿರಾಟ್‌ ಕೊಹ್ಲಿ 2017ರಲ್ಲಿ ಎಂ.ಎಸ್. ಧೋನಿ ಕೈಯಿಂದ ಎಲ್ಲ 3 ಮಾದರಿಯ ಕ್ರಿಕೆಟ್‌ನ ನಾಯಕತ್ವವನ್ನು ವಹಿಸಿಕೊಂಡ ಬಳಿಕ ಪಂದ್ಯದಿಂದ ಪಂದ್ಯಕ್ಕೆ ಬಲಶಾಲಿಯಾಗುತ್ತಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಇಂಗ್ಲೆಂಡ್, ವೆಸ್ಟ್‌ಇಂಡೀಸ್ ಹಾಗೂ ಶ್ರೀಲಂಕಾ ವಿರುದ್ಧ ಸರಣಿಯನ್ನು ಜಯಿಸಿತ್ತು. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್‌ಗೆ ತಲುಪಿತ್ತು. ಇಂದೋರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ರವಿವಾರ ಮೂರನೆ ಏಕದಿನ ಪಂದ್ಯವನ್ನು ಗೆಲ್ಲುವುದರೊಂದಿಗೆ ಇನ್ನೂ ಎರಡು ಪಂದ್ಯಗಳ ಬಾಕಿ ಇರುವಾಗಲೇ 3-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಗಿಟ್ಟಿಸಿಕೊಂಡಿದೆ.

ಭಾರತ ಸತತ 9ನೆ ಏಕದಿನ ಪಂದ್ಯವನ್ನು ಗೆದ್ದುಕೊಂಡಿದೆ. ಭಾರತ 2008ರ ನವೆಂಬರ್‌ನಿಂದ 2009ರ ಫೆಬ್ರವರಿಯ ನಡುವೆ ಸತತ 9 ಪಂದ್ಯಗಳನ್ನು ಜಯಿಸಿದ ಸಾಧನೆ ಮಾಡಿತ್ತು. ಇದೀಗ ಕೊಹ್ಲಿ 2008-09 ಹಾಗೂ 2006ರಲ್ಲಿ ಸತತ ಏಕದಿನ ಪಂದ್ಯಗಳನ್ನು ಜಯಿಸಿದ್ದ ಎಂ.ಎಸ್. ಧೋನಿ ಹಾಗೂ ರಾಹುಲ್ ದ್ರಾವಿಡ್‌ರ ನಾಯಕತ್ವದ ದಾಖಲೆಯನ್ನು ಸರಿಗಟ್ಟಿದ್ದಾರೆ.

ಆಸ್ಟ್ರೇಲಿಯ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತದ ಮೊದಲ ನಾಯಕ ವಿರಾಟ್ ಕೊಹ್ಲಿ. ಭಾರತ ಇದೀಗ ಹೋಳ್ಕರ್ ಸ್ಟೇಡಿಯಂನಲ್ಲಿ ಆಡಿರುವ ಎಲ್ಲ 5 ಪಂದ್ಯಗಳನ್ನು ಜಯಿಸಿದ ಸಾಧನೆ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News