ಬಾಂಗ್ಲಾ ಪ್ರಧಾನಿ ಕೊಲೆ ಯತ್ನ ನಡೆದಿಲ್ಲ

Update: 2017-09-25 17:31 GMT

ಢಾಕಾ, ಸೆ. 25: ಕಳೆದ ತಿಂಗಳು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾರನ್ನು ಅವರ ಅಂಗರಕ್ಷಕರು ಕೊಲ್ಲಲು ಸಂಚು ನಡೆಸಿದ್ದರು ಎಂಬ ಕೆಲವು ಮಾಧ್ಯಮ ವರದಿಗಳನ್ನು ಪ್ರಧಾನಿ ಕಚೇರಿ ನಿರಾಕರಿಸಿದೆ.

ಕೆಲವು ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳು ‘ಸಂಪೂರ್ಣ ಆಧಾರರಹಿತ, ತಪ್ಪು ಮಾಹಿತಿ ನೀಡುವ ಹಾಗೂ ದುರುದ್ದೇಶಪೂರಿತ’ ಎಂಬುದಾಗಿ ಪ್ರಧಾನಿ ಕಚೇರಿಯು ಹೇಳಿಕೆಯೊಂದರಲ್ಲಿ ಹೇಳಿದೆ ಹಾಗೂ ಈ ವರದಿಗಳನ್ನು ಖಂಡಿಸಿದೆ.

ಹಸೀನಾರ ವಿಶೇಷ ಭದ್ರತಾ ಪಡೆಯ ಅಧಿಕಾರಿಗಳು ಆಗಸ್ಟ್ 24ರಂದು ಅವರನ್ನು ಕೊಲ್ಲಲು ಯತ್ನಿಸಿದರು ಎಂಬ ವದಂತಿಗಳು ಕಪೋಲಕಲ್ಪಿತ ಮತ್ತು ದೇಶದ ಘನತೆಗೆ ಹಾನಿಯುಂಟು ಮಾಡುವಂಥಾದ್ದು ಎಂದು ಉಪ ಪತ್ರಿಕಾ ಕಾರ್ಯದರ್ಶಿ ಮುಹಮ್ಮದ್ ಅಶ್ರಫುಲ್ ಅಲಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News