ಸಿರಿಯ: ರಶ್ಯ ವಾಯು ದಾಳಿಯಲ್ಲಿ 45 ಬಂಡುಕೋರರ ಸಾವು

Update: 2017-09-25 17:33 GMT

ಬೆರೂತ್, ಸೆ. 25: ವಾಯುವ್ಯ ಸಿರಿಯದ ರಾಜ್ಯ ಇದ್ಲಿಬ್‌ನಲ್ಲಿ ರಶ್ಯ ನಡೆಸಿದ ವಾಯು ದಾಳಿಯಲ್ಲಿ ಬಂಡುಕೋರ ಗುಂಪೊಂದರ 45 ಹೋರಾಟಗಾರರು ಹತರಾಗಿದ್ದಾರೆ ಎಂದು ಸಿರಿಯ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

ಈ ಗುಂಪು ರಶ್ಯ ಉಸ್ತುವಾರಿಯಲ್ಲಿ ಕಝಕ್ ರಾಜಧಾನಿ ಅಸ್ತಾನದಲ್ಲಿ ನಡೆದ ಶಾಂತಿ ಮಾತುಕತೆಯಲ್ಲಿ ಭಾಗವಹಸಿದ್ದವು. ಹಾಗಾಗಿ, ರಶ್ಯ ಈ ಗುಂಪಿನ ಮೇಲೆ ಯಾಕೆ ದಾಳಿ ನಡೆಸಿತು ಎನ್ನುವುದು ಸ್ಪಷ್ಟವಾಗಿಲ್ಲ.

ಆರಂಭದಲ್ಲಿ ಮೃತಪಟ್ಟವರ ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಬಳಿಕ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಯಿತು ಎಂದು ವೀಕ್ಷಣಾಲಯ ತಿಳಿಸದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News