ಘರ್‍ ವಾಪ್ಸಿ ಕೇಂದ್ರದಲ್ಲಿ ದೌರ್ಜನ್ಯ: ಓರ್ವನ ಬಂಧನ

Update: 2017-09-26 07:22 GMT

ತೃಪ್ಪುಣಿತ್ತುರ, ಸೆ.26: ಅನ್ಯ ಧರ್ಮೀಯರನ್ನು ಮದುವೆಯಾದ ಹಿಂದೂ ಯುವತಿಯರ ಮೇಲೆ ದೌರ್ಜನ್ಯ ನಡೆಸಿ ಮರುಮತಾಂತರ ಮಾಡುತ್ತಿದೆ ಎನ್ನಲಾದ ಘರ್ ವಾಪ್ಸಿ ಕೇಂದ್ರದಿಂದ ಓರ್ವನನ್ನು ಪೊಲೀಸರು  ಬಂಧಿಸಿದ್ದಾರೆ.

ಉದಯಂಪೆರೂರ್ ಕಂಡನಾಟ್ಟ್ ಯೋಗ ಮತ್ತು ಚಾರಿಟೇಬಲ್ ಟ್ರಸ್ಟ್(ಘರ್‍ವಾಪಸಿ ಕೇಂದ್ರ)ನ ವ್ಯವಸ್ಥಾಪಕ ಮನೋಜ್ ಗುರೂಜಿಯ ಮುಖ್ಯ  ಸಹಾಯಕರಲ್ಲಿ ಓರ್ವನಾದ ಶ್ರೀಜೇಶ್‍ನನ್ನು ಪೊಲೀಸರ ತನಿಖಾ ತಂಡ ಅದೇ ಕೇಂದ್ರದಲ್ಲಿ ಬಂಧಿಸಿದೆ.

ಶ್ರೀಜೇಶ್ ಹೈಕೋರ್ಟು ವಕೀಲ ಎಂದು ಹೇಳಿಕೊಂಡು ಕೇಂದ್ರದಲ್ಲಿದ್ದ ಯುವತಿಯರಿಗೆ  ಬೆದರಿಕೆಯೊಡ್ಡುವುದಕ್ಕೆ ನೇತೃತ್ವ ವಹಿಸಿದ್ದ ವ್ಯಕ್ತಿಯಾಗಿದ್ದು, ಘಟನೆಯನ್ನು ಮೀಡಿಯಾ ಒನ್ ಟಿವಿ ಚಾನೆಲ್ ಬಹಿರಂಗಪಡಿಸಿತ್ತು. ತದನಂತರ ಮನೋಜ್ ಗುರೂಜಿ ತಲೆಮರೆಸಿಕೊಂಡಿದ್ದಾನೆ. ಇದೇವೇಳೆ ಯೋಗ ಕೇಂದ್ರವನ್ನು ಮುಚ್ಚುವುದಕ್ಕಾಗಿ ಉದಯಂಪೆರೂರ್ ಪಂಚಾಯತ್ ನೋಟಿಸ್ ನೀಡಿದೆ.  ಕಮರ್ಶಿಯಲ್ ಕಾರ್ಯವೆಸಗಲು ಅನುಮತಿಸಲಾದ ಕೇಂದ್ರದಲ್ಲಿ 45ರಷ್ಟು ಮಂದಿ ವಾಸವಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News