ಹೈದರಾಬಾದ್ ನ ಖಾಝಿಯ ಬಂಧನ

Update: 2017-09-26 12:59 GMT

ಹೊಸದಿಲ್ಲಿ, ಸೆ.26: ಅಪ್ರಾಪ್ತ ಬಾಲಕಿಯರ ವಿವಾಹ ಜಾಲವೊಂದರಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಹೈದರಾಬಾದ್ ನ ಖಾಝಿ ಅಲಿ ಅಬ್ದುಲ್ಲಾ ರಿಫಾಯಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಮೂವರು ಒಮಾನ್ ಶೇಖ್ ಗಳು ಹಾಗೂ ಹೈದರಾಬಾದ್ ನ ಖಾಝಿಯನ್ನು ಬಂಧಿಸಲಾಗಿದ್ದು, ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಡಿಸಿಪಿ ವಿ. ಸತ್ಯನಾರಾಯಣ ಹೇಳಿದ್ದಾರೆ.ಈ ಜಾಲದ ಹಿಂದಿರುವ ಎಲ್ಲರನ್ನೂ ಶೀಘ್ರವೇ ಬಂಧಿಸಲಾಗುವುದು ಎಂದವರು ಹೇಳಿದ್ದಾರೆ. 

ಎಂಟು ಮಂದಿ ಅರಬ್ ಪ್ರಜೆಗಳು, ಬ್ರೋಕರ್ ಗಳು ಹಾಗೂ ಸ್ಥಳೀಯ ಖಾಝಿಗಳನ್ನು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದ ನಂತರ ಅಲಿ ಅಬ್ದುಲ್ಲಾ ರಿಫಾಯಿ ತಲೆಮರೆಸಿಕೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News