ಸರಕಾರದ ಯೋಜನೆಯಡಿ ಅಪ್ರಾಪ್ತ ಬಾಲಕಿಯ ವಿವಾಹ
Update: 2017-09-26 18:33 IST
ಭೋಪಾಲ್, ಸೆ.26: ಸರಕಾರದ ಯೋಜನೆಯಡಿ ಅಪ್ರಾಪ್ತ ಬಾಲಕಿಯ ವಿವಾಹಕ್ಕೆ ವ್ಯವಸ್ಥೆ ಮಾಡಿದ ಆರೋಪದಡಿ ಬಿಜೆಪಿ ಮುಖಂಡ, ಮಾಜಿ ಸಚಿವ ಹರಿಶಂಕರ್ ಖಾತಿಕ್ ಹಾಗೂ ಇತರ ನಾಲ್ವರು ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಟಿಕಂಗಡದ ನ್ಯಾಯಾಲಯವೊಂದು ಆದೇಶಿಸಿದೆ.
ಮಧ್ಯಪ್ರದೇಶದ ಮಾಜಿ ಸಚಿವ ಹರಿಶಂಕರ್ ಖಾತಿಕ್ ಹಾಗೂ ಇತರ ನಾಲ್ವರು ಸಚಿವರು 2012ರಲ್ಲಿ ರಾಜ್ಯ ಸರಕಾರದ ‘ಮುಖ್ಯಮಂತ್ರಿ ಕನ್ಯಾದಾನ್ ಯೋಜನೆ’ಯಡಿ ಬುಡಕಟ್ಟು ಗುಂಪಿನ ಅಪ್ರಾಪ್ತ (15 ವರ್ಷ 11 ತಿಂಗಳು) ಬಾಲಕಿಯೋರ್ವಳ ವಿವಾಹದ ವ್ಯವಸ್ಥೆ ಮಾಡಿದ್ದರು ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಯಾದವೇಂದ್ರ ಸಿಂಗ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ನ್ಯಾಯಾಲಯ, ಖಾತಿಕ್ ಸೇರಿದಂತೆ ಆರೋಪಿಗಳ ವಿರುದ್ಧ ಬಾಲ್ಯವಿವಾಹ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಿದೆ.