ಹರ್ಯಾಣ: ಅಧ್ಯಾಪಕರ ಪರೀಕ್ಷೆಗೆ ಆಧಾರ್ ಕಡ್ಡಾಯ
Update: 2017-09-27 21:17 IST
ಚಂಡಿಗಢ, ಸೆ. 26: ಹರ್ಯಾಣ ಶಾಲಾ ಶಿಕ್ಷಣ ಮಂಡಳಿ ಡಿಸೆಂಬರ್‌ನಲ್ಲಿ ಆಯೋಜಿಸಿರುವ ಹರ್ಯಾಣ ಅಧ್ಯಾಪಕರ ಅರ್ಹತಾ ಪರೀಕ್ಷೆ (ಎಚ್‌ಇಟಿಇ)ಗೆ ಹಾಜರಾಗಲು ಆಧಾರ್ ಕಾರ್ಡ್ ಅನ್ನು ಮಂಡಳಿ ಕಡ್ಡಾಯಗೊಳಿಸಿದೆ.
ಆಧಾರ್ ಕಾರ್ಡ್ ಇಲ್ಲದೆ ಎಚ್‌ಟಿಇಟಿ ಅರ್ಜಿ ಸ್ವೀಕರಿಸುವುದಿಲ್ಲ ಎಂದು ಮಂಡಳಿ ಅಧ್ಯಕ್ಷ ಜಗ್ಬೀರ್ ಸಿಂಗ್ ಹೇಳಿದ್ದಾರೆ.
ಮಂಡಳಿಯ ಎಚ್‌ಟಿಇಟಿಗೆ ಅರ್ಜಿ ಸಲ್ಲಿಸುವಾಗ ಯಾವುದೇ ಅನಾನುಕೂಲತೆ ಆಗುವುದನ್ನು ತಪ್ಪಿಸಲು ಶಾಲೆ ಪ್ರಮಾಣ ಪತ್ರ ಹಾಗೂ ಎಸೆಸೆಲ್ಸಿ ಪ್ರಮಾಣ ಪತ್ರದಲ್ಲಿ ಇರುವಂತೆ ತಮ್ಮ ಆಧಾರ್ ಕಾರ್ಡ್‌ಗಳ ವಿವರಗಳನ್ನು ಸೂಕ್ತ ಸಮಯದಲ್ಲಿ ತಿದ್ದುಪಡಿ ಮಾಡಬೇಕು ಎಂದು ಅವರು ಅರ್ಹ ಅಭ್ಯರ್ಥಿಗಳನ್ನು ಆಗ್ರಹಿಸಿದ್ದಾರೆ. ಮೂಲ ದಾಖಲೆಗಳು ಆಧಾರ್ ಕಾರ್ಡ್‌ನೊಂದಿಗೆ ಹೋಲಿಕೆ ಆಗದೇ ಇದ್ದಲ್ಲಿ ಅಂತಹ ಅರ್ಜಿಯನ್ನು ಅಸಂಪೂರ್ಣ ಎಂದು ಪರಿಗಣಿಸಲಾಗುವುದು ಹಾಗೂ ರದ್ದುಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.