ಭಾರತಕ್ಕೆ ಖಾಯಂ ಭದ್ರತಾ ಮಂಡಳಿ ಸದಸ್ಯತ್ವ ಕೋರಿ ನಿರ್ಣಯ
Update: 2017-09-27 22:56 IST
ವಾಶಿಂಗ್ಟನ್, ಸೆ. 27: ಭಾರತದ ಬೆಳೆಯುತ್ತಿರುವ ಪ್ರಭಾವವನ್ನು ಗಮನದಲ್ಲಿರಿಸಿಕೊಂಡು ಅದಕ್ಕೆ ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವನ್ನು ನೀಡುವುದಕ್ಕೆ ಬೆಂಬಲ ಕೋರಿ ಅಮೆರಿಕದ ಇಬ್ಬರು ಡೆಮಾಕ್ರಟಿಕ್ ಪಕ್ಷದ ಕಾಂಗ್ರೆಸ್ ಸದಸ್ಯರು ಪ್ರತಿನಿಧಿಗಳ ಸದನದಲ್ಲಿ ನಿರ್ಣಯವೊಂದನ್ನು ಮಂಡಿಸಿದ್ದಾರೆ.
ಅಮೆರಿಕದ ಕಾಂಗ್ರೆಸ್‌ನಲ್ಲಿ ಅತ್ಯಂತ ದೀರ್ಘ ಅವಧಿ ಸೇವೆ ಸಲ್ಲಿಸಿದ ಭಾರತೀಯ ಅಮೆರಿಕನ್ ಆಮಿ ಬೇರಾ ಮತ್ತು ಕಾಂಗ್ರೆಸ್‌ನಲ್ಲಿ ಭಾರತ ಕುರಿತ ಕಾಕಸ್ ಸ್ಥಾಪಿಸಿದ ಫ್ರಾಂಕ್ ಪ್ಯಾಲೋನ್ ಈ ನಿರ್ಣಯವನ್ನು ಮಂಡಿಸಿದ್ದಾರೆ.
‘‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿರುವ ಐದು ಖಾಯಂ ಸದಸ್ಯರು 60 ವರ್ಷಗಳ ಹಿಂದಿನ ಜಗತ್ತನ್ನು ಪ್ರತಿಬಿಂಬಿಸುತ್ತಾರೆ. ಬೆಳೆಯುತ್ತಿರುವ ಜಾಗತಿಕ ಸಮೃದ್ಧಿಯಲ್ಲಿ ಭಾರತದ ಪಾತ್ರವನ್ನು ನಾವು ಗುರುತಿಸುವ ಸಮಯ ಬಂದಿದೆ ಎಂದು ಬೇರಾ ಹೇಳಿದ್ದಾರೆ.