×
Ad

ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್‌ಗೆ ‘ರೈಟ್ ಲೈವ್ಲಿ ಹುಡ್’ ಪ್ರಶಸ್ತಿ

Update: 2017-09-27 23:17 IST

ಮುಂಬೈ, ಸೆ. 26: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ (ನಿಯೋಜಿತ)ರಾದ ಮುಂಬೈಯ ಮೂಲದ ಐಐಟಿ ಪದವೀಧರ ಕಾಲಿನ್ ಗೊನ್ಸಾಲ್ವಿಸ್‌ ‘ಪರ್ಯಾಯ ನೋಬೆಲ್ ಪ್ರಶಸ್ತಿ’ ಎಂದು ಬಣ್ಣಿಸಲಾಗುವ ಪ್ರತಿಷ್ಠಿತ ‘ರೈಟ್ ಲೈವ್ಲಿ ಹುಡ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಗೆ ಆಯ್ಕೆಯನ್ನು ಮಂಗಳವಾರ ಸ್ವೀಡನ್‌ನಲ್ಲಿ ಘೋಷಿಸಲಾಗಿದೆ. ಈ ಪ್ರಶಸ್ತಿ ಪಡೆಯುತ್ತಿರುವ ಭಾರತದ ಮೊದಲ ಮಾನವ ಹಕ್ಕು ವಕೀಲ ಕಾಲಿನ್. ಅಲ್ಲದೆ ಕಳೆದ 8 ವರ್ಷಗಳಲ್ಲಿ ಭಾರತ ಪಡೆಯತ್ತಿರುವ ಮೊದಲ ಪ್ರಶಸ್ತಿ ಇದಾಗಿದೆ. ಈ ಪ್ರಶಸ್ತಿಯನ್ನು ಮೂರು ಮಂದಿ ಹಂಚಿಕೊಂಡಿದ್ದಾರೆ.

ಭಾರತದ ಅಂಚಿಗೆ ತಳ್ಳಲ್ಪಟ್ಟ ಹಾಗೂ ದುರ್ಬಲ ನಾಗರಿಕರ ಮೂಲಭೂತ ಮಾನವ ಹಕ್ಕುಗಳನ್ನು ರಕ್ಷಿಸಲು ಕಳೆದ ಮೂರು ದಶಕಗಳಿಂದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ನವೀನ ರೀತಿಯಲ್ಲಿ, ದಣಿವರಿಯದೆ ಬಳಸುತ್ತಿರುವ ಹಿನ್ನೆಲೆಯಲ್ಲಿ ಗೊನ್ಸಾಲ್ವಿಸ್‌ಗೆ ಈ ಗೌರವ ನೀಡಲಾಗುತ್ತಿದೆ ಎಂದು ಸ್ಟಾಕ್‌ಹೋಮ್ ಮೂಲದ ಪ್ರಶಸ್ತಿ ಪ್ರತಿಷ್ಠಾನ ತಿಳಿಸಿದೆ.

“ಪ್ರಶಸ್ತಿಗೆ ನಾನು ನಮ್ರನಾಗಿದ್ದೇನೆ. ಭಾರತದ ಕತ್ತಲ ಅವಧಿಯಲ್ಲಿ ಹಾಗೂ ಮಾನವ ಹಕ್ಕು ಹೋರಾಟಗಾರರು ದಿಗ್ಭಂದನಕ್ಕೆ ಒಳಗಾಗಿರುವ ಸಂದರ್ಭ ಈ ಪ್ರಶಸ್ತಿ ಬಂದಿದೆ” ಎಂದು ಗೊನ್ಸಾಲ್ವಿಸ್‌ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News