×
Ad

ರಶ್ಯದ ಕೊನೆಯ ರಾಸಾಯನಿಕ ಶಸ್ತ್ರಗಳ ನಿರ್ಮೂಲ: ಪುಟಿನ್

Update: 2017-09-28 22:44 IST

ಮಾಸ್ಕೊ, ಸೆ. 28: ರಶ್ಯವು ತನ್ನಲ್ಲಿರುವ ಕೊನೆಯ ರಾಸಾಯನಿಕ ಅಸ್ತ್ರಗಳನ್ನು ನಾಶ ಮಾಡುವುದು ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಘೋಷಿಸಿದ್ದಾರೆ. ತನ್ನ ಈ ನಿರ್ಧಾರವನ್ನು ಐತಿಹಾಸಿಕ ಎಂಬುದಾಗಿ ಬಣ್ಣಿಸಿದ ಅವರು, ಇದೇ ಕ್ರಮವನ್ನು ಅಮೆರಿಕ ಅನುಸರಿಸುತ್ತಿಲ್ಲ ಎಂದು ಆರೋಪಿಸಿದರು.

‘‘ರಶ್ಯದ ರಾಸಾಯನಿಕ ಅಸ್ತ್ರಗಳ ಸಂಗ್ರಹಾಗಾರದ ಕೊನೆಯ ಅಸ್ತ್ರಗಳನ್ನು ಇಂದು ನಾಶಗೊಳಿಸಲಾಗುವುದು’’ ಎಂದು ಪುಟಿನ್ ಟೆಲಿವಿಶನ್‌ನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದರು.

‘‘ಸೋವಿಯತ್ ಕಾಲದಿಂದ ನಾವು ಪಡೆದುಕೊಂಡಿರುವ ಬೃಹತ್ ಪ್ರಮಾಣದ ರಾಸಾಯನಿಕ ಶಸ್ತ್ರಗಳ ಸಂಗ್ರಹಾಗಾರವನ್ನು ಗಣನೆಗೆ ತೆಗೆದುಕೊಂಡರೆ ಇದೊಂದು ನಿಜವಾಗಿಯೂ ಐತಿಹಾಸಿಕ ನಿರ್ಧಾರವಾಗಿದೆ. ಜಗತ್ತಿನ ಎಲ್ಲ ಜೀವಿಗಳನ್ನು ಹಲವು ಬಾರಿ ನಿರ್ನಾಮ ಮಾಡಲು ಈ ರಾಸಾಯನಿಕ ಅಸ್ತ್ರಗಳ ಸಂಗ್ರಹ ಸಾಕು ಎಂಬುದಾಗಿ ಪರಿಣತರು ಭಾವಿಸಿದ್ದಾರೆ’’ ಎಂದರು.

‘‘ಆಧುನಿಕ ಜಗತ್ತನ್ನು ಹೆಚ್ಚು ಸುರಕ್ಷಿತ ಮತ್ತು ಸಮತೋಲಿತವನ್ನಾಗಿ ಮಾಡುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News