×
Ad

ಇಡೀ ದ್ವೀಪ ತೆರವಿಗೆ ಆದೇಶ

Update: 2017-09-28 22:53 IST

ವೆಲಿಂಗ್ಟನ್, ಸೆ. 28: ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ವ್ಯಾನ್‌ವಾಟು ದ್ವೀಪ ದೇಶದ ದ್ವೀಪವೊಂದರಲ್ಲಿ ಜ್ವಾಲಾಮುಖಿ ಸ್ಫೋಟಕ್ಕೆ ಕ್ಷಣಗಣನೆ ನಡೆಯುತ್ತಿರುವಂತೆಯೇ, ಇಡೀ ದ್ವೀಪವನ್ನು ತೆರವುಗೊಳಿಸಲು ಅಧಿಕಾರಿಗಳು ಆದೇಶ ನೀಡಿದ್ದಾರೆ.

ಗುರುವಾರ ಸಭೆ ಸೇರಿದ ದ್ವೀಪ ದೇಶದ ಸಚಿವರು, ಜನರ ಪ್ರಾಣಗಳನ್ನು ಅಪಾಯಕ್ಕೆ ಒಡ್ಡಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದರು ಎಂದು ಸರಕಾರಿ ವಕ್ತಾರ ಹಿಲೇರ್ ಬ್ಯೂಲ್ ತಿಳಿಸಿದರು. ಹಾಗಾಗಿ, ಆ್ಯಂಬೇ ದ್ವೀಪದ ಜನರನ್ನು ಕಡ್ಡಾಯವಾಗಿ ತೆರವುಗೊಳಿಸಲು ಆದೇಶ ಹೊರಡಿಸಲಾಗಿದೆ. ಈ ದ್ವೀಪದಲ್ಲಿ ಸುಮಾರು 11,000 ಜನರು ವಾಸಿಸುತ್ತಿದ್ದಾರೆ.

ಕಳೆದ ವಾರ ಅಧಿಕಾರಿಗಳು ಮನರೊ ಜ್ವಾಲಾಮುಖಿಯ ಚಟುವಟಿಕೆಯ ಮಟ್ಟವನ್ನು 4ಕ್ಕೆ ಏರಿಸಿದ್ದರು ಹಾಗೂ ಸೋಮವಾರ ತುರ್ತು ಸ್ಥಿತಿಯನ್ನು ಘೋಷಿಸಿದರು.

ಮೊದಲು ಜ್ವಾಲಾಮುಖಿಗೆ ಸಮೀಪದಲ್ಲಿ ವಾಸಿಸುವ ಜನರನ್ನು ದ್ವೀಪದ ಇತರ ಭಾಗಗಳಿಗೆ ವರ್ಗಾಯಿಸುತ್ತಾರೆ.

ದ್ವೀಪ ದೇಶದ ಜನಸಂಖ್ಯೆ 2016ರ ಜನಗಣತಿಯಂತೆ 2,86,429.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News