ಸ್ಯಾಂಡಲ್‌ವುಡ್‌ಗೆ 'ವಿಕ್ರಂ ವೇದಾ'

Update: 2017-09-29 13:58 GMT

ಕಲೆಗೆ ಯಾವುದೇ ಗಡಿಗಳಿಲ್ಲ. ಚಿತ್ರರಂಗದ ಮಟ್ಟಿಗೆ ಇದು ಅಕ್ಷರಶಃ ಸತ್ಯ. ಒಂದು ಅದ್ಭುತವಾದ ಚಿತ್ರ ಯಾವ ಭಾಷೆಯಲ್ಲಿ ತಯಾರಾಗಲಿ, ಕೂಡಲೇ ಅದಕ್ಕೆ ರಿಮೇಕ್ ನಿರ್ಮಾಪಕರು ಮುಗಿಬೀಳುತ್ತಾರೆ. ಇತ್ತೀಚೆಗೆ ಬಿಡುಗಡೆಯಾಗಿ, ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸಿರುವ ತಮಿಳುಚಿತ್ರ ‘ವಿಕ್ರಮ್ ವೇದಾ’ ಈಗ ಸ್ಯಾಂಡಲ್‌ವುಡ್‌ನಲ್ಲಿ ರಿಮೇಕ್ ಆಗಲು ಸಿದ್ಧವಾಗುತ್ತಿದೆ.

ಅತ್ಯುತ್ತಮವಾದ ಕಥಾವಸ್ತು ಹಾಗೂ ರೋಮಾಂಚಕಕಾರಿ ಕ್ಲೈಮಾಕ್ಸ್‌ನಿಂದ ಚಿತ್ರಪ್ರೇಮಿಗಳನ್ನು ಹುಚ್ಚೆಬ್ಬಿಸಿದ್ದ ತಮಿಳು ಸಿನೆಮಾ ‘ವಿಕ್ರಮ್‌ವೇದಾ’ದ ಕನ್ನಡ ರಿಮೇಕನ್ನು, ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ದೇಶಕ ಸಂತೋಷ್ ಆನಂದ್‌ರಾಮ್ ನಿರ್ದೇಶಿಸಲಿದ್ದಾರಂತೆ. ಚಿತ್ರದ ನಾಯಕನಾಗಿ ಕಿಚ್ಚ ಸುದೀಪ್ ನಟಿಸಲಿದ್ದಾರೆಂಬ ಬಲವಾದ ವದಂತಿಗಳು ಕೂಡಾ ಕೇಳಿಬರುತ್ತಿವೆ. ಈಗಾಗಲೇ ಸುದೀಪ್ ಕೈಯಲ್ಲಿ ನಾಲ್ಕೈದು ಚಿತ್ರಗಳಿರುವುದರಿಂದ ಈ ಚಿತ್ರಕ್ಕಾಗಿ ಸಮಯವನ್ನು ಹೊಂದಿಸಿಕೊಳ್ಳಬಹುದೆಂಬ ಸಂದೇಹಗಳು ಕೂಡಾ ಚಿತ್ರರಂಗದ ಮಂದಿಯನ್ನು ಕಾಡುತ್ತಿದೆ.

ಸ್ಯಾಂಡಲ್‌ವುಡ್‌ನ ಅತ್ಯಂತ ಅದ್ಧೂರಿ ಚಿತ್ರವೆಂಬ ಹೆಗ್ಗಳಿಕೆ ಹೊಂದಿರುವ ವಿಲನ್‌ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್, ಈಗಾಗಲೇ ರಿಮೇಕ್ ಹಕ್ಕುಗಳಿಗಾಗಿ ‘ವಿಕ್ರಮ್ ವೇದಾ’ದ ನಿರ್ಮಾಪಕರ ಜೊತೆ ಮಾತುಕತೆ ನಡೆಸಿದ್ದಾರೆ.

ಕಳೆದ ವರ್ಷ ತೆರೆಕಂಡ ‘ವಿಕ್ರಮ ವೇದಾ’ದಲ್ಲಿ ಮಾಧವನ್ ಹಾಗೂ ವಿಜಯ್ ಸೇತುಪತಿ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರು. 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಚಿತ್ರದ ಬಾಕ್ಸ್‌ಆಫೀಸ್ ಗಳಿಕೆ 50 ಕೋಟಿ ರೂ. ದಾಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News